BBK 13: ಮೊದಲ ವಾರ ದೊಡ್ಮನೆಯಿಂದ ನಾಮಿನೇಟ್ ಆಗಿದ್ದ ಕಂಟೆಸ್ಟೆಂಟ್ ಪ್ರಥಮ ಪ್ರಸಾದ್ ಎಲಿಮಿನೇಟ್ ಆಗಿ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇವರು ಹೊರಬಂದ ಬೆನ್ನಲ್ಲೇ ಕೋ-ಕಂಟೆಸ್ಟೆಂಟ್ ಆಗಿದ್ದ ಓಂ ಪ್ರಕಾಶ್ ರಾವ್ ಅನಾರೋಗ್ಯದ ಕಾರಣ ಶೋದಿಂದ ಹೊರಬಂದಿದ್ದಾರೆ.
ಓಂ ಪ್ರಕಾಶ್ ರಾವ್ ದಿಢೀರ್ ಮನೆಯಿಂದ ಹೊರಬರಲು ಕಾರಣ ಏನಿರಬಹುದು ಎಂಬುದರ ಬಗ್ಗೆ ಇದೀಗ ಸ್ಪರ್ಧಿಯಾಗಿದ್ದ ಪ್ರಥಮ ಪ್ರಸಾದ್ ಪಬ್ಲಿಕ್ ಟಿವಿಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಓಂ ಪ್ರಕಾಶ್ ರಾವ್ ಅವರಿಗೆ ಮೊದಲೇ ಕಾಲಿಗೆ ಗಾಯವಾಗಿತ್ತು. ಬಳಿಕ ಫ್ಲೈಟ್‌ನಲ್ಲಿ ಕೂತೇ ಇರುವುದು, ಖಾರ ತಿನ್ನುವ ಟಾಸ್ಕ್‌ನಲ್ಲಿ ಭಾಗವಹಿಸಿದ್ದು, ವಿಶ್ರಾಂತಿ ಇಲ್ಲದೆ ಟಾಸ್ಕ್‌ಗಳಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಸರಿಯಾಗಿ ಮಲಗಲು ಆಗದ ಜಾಗದಲ್ಲೂ ಅಡ್ಜಸ್ಟ್ ಮಾಡಿಕೊಂಡು ಹೋಗಬೇಕಾಗಿತ್ತು. ಈ ಕಾರಣಕ್ಕೆ ಅವರ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎಂದು ಭಾವಿಸುತ್ತೇನೆ ಎಂದು ಪ್ರಥಮ ಪ್ರಸಾದ್ ಹೇಳಿದ್ದಾರೆ. ಹೀಗಾಗಿ ಅವರಿಗೆ ಶೋದಿಂದ ಹೊರಗುಳಿಯುವುದು ಅನಿವಾರ್ಯವಾಗಿರಬಹುದು ಎಂದು ಪ್ರಥಮ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ಪವರ್ ಮ್ಯಾನ್ ಆದ ದೊಡ್ಮನೆ ಕುಡಿ ಯುವ ರಾಜಕುಮಾರ್
ಸದ್ಯ ಓಂ ಪ್ರಕಾಶ್ ರಾವ್ ಬಾಣಸವಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಗ್‌ಬಾಸ್ ಮನೆಯಿಂದ ನೇರವಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಓಂ ಪ್ರಕಾಶ್ ರಾವ್ ಅನಿವಾರ್ಯವಾಗಿ ಶೋದಿಂದ ಹೊರಗುಳಿಯಬೇಕಾಗಿದೆ.ಇದನ್ನೂ ಓದಿ: BBK 13: ಬಳೆ ಹಾಕಿಕೊಂಡು ಕುಳಿತುಕೊಳ್ಳಿ ಎಂದ ಕಿರಣ್ – ದೊಡ್ಮನೆಯಲ್ಲಿ ಮತ್ತೆ ಶುರುವಾಯ್ತು ‘ಬಳೆ’ ವಿವಾದ

