ಬೆಂಗಳೂರು: ಅಸನಿ ಚಂಡಮಾರುತದ ಪರಿಣಾಮವಾಗಿ ನಗರದಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಪ್ರತಿಕ್ರಿಯಿಸಿ, ಅಸನಿ ಚಂಡಮಾರುತದ ತೀವ್ರತೆಯಿಂದಾಗಿ ಮಳೆಯಾಗುವ ವೇಳೆ ಗಾಳಿ ಹೆಚ್ಚಾಗಲಿದ್ದು, ಗುಡುಗು ಹಾಗೂ ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಅತಿಯಾಗಿ ಮಳೆಯಾಗಲಿದ್ದು, ಸೈಕ್ಲೋನ್‍ನಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುವಮೋರ್ಚಾ ಸಭೆಯಲ್ಲಿ ದ್ರಾವಿಡ್ ಭಾಗಿಯಾಗಲಿದ್ದಾರೆ: ಬಿಜೆಪಿ ಶಾಸಕ
Advertisement
Advertisement
ಬುಧವಾರ ಸಹಿತ ಮೋಡ ಕವಿದ ವಾತಾವರಣ ಹೀಗೆಯೇ ಇರಲಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಒಳನಾಡು ಬಿಟ್ಟು ಬೇರೆ ಎಲ್ಲ ಕಡೆ ಮಳೆ ಬರಲಿದೆ. ಮುಂದಿನ ಮೂರು ದಿನಗಳು ಬಹುತೇಕ ಕಡೆ ಮಳೆ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ