ಕಾರವಾರ: ಸ್ಯಾಂಡಲ್‍ವುಡ್ ನ ಸೂಪರ್ ಸ್ಟಾರ್ ಉಪೇಂದ್ರ ಅವರ ಮಗ ಆಯುಷ್ ಉಪೇಂದ್ರ ದೊಡ್ಡವನಾಗಿದ್ದಾನೆ. ಹೀಗಾಗಿ ಮಗನಿಗೆ ಬ್ರಾಹ್ಮಣ ಸಂಪ್ರದಾಯದಂತೆ ಬಹ್ಮೋಪದೇಶಕ್ಕೆ ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ್ಪಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪ್ರಸಿದ್ಧ ಸೋಂದಾ ಶ್ರೀ ವಾದಿರಾಜ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ, ದೇವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.
ನಟ ಮತ್ತು ನಿರ್ದೇಶಕ ಉಪೇಂದ್ರ ಮತ್ತು ಪ್ರಿಯಾಂಕ ದಂಪತಿ ತಮ್ಮ ಮಗನ ಉಪನಯನ ನಿಮಿತ್ತ ದೇವರ ದರ್ಶನ ಪಡೆದು ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.
Advertisement
Advertisement
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಗ್ರಾಮದಲ್ಲಿರುವ ಸೋದೆ ವಾದಿರಾಜ ಮಠವು ಉಪೇಂದ್ರ ಕುಟುಂಬದ ಗುರು ಮಠವಾಗಿದ್ದು, ಶನಿವಾರ ದಿನ ಭೂತರಾಜರಿಗೆ ವಿಶೇಷ ಪೂಜೆ ಇದ್ದ ಕಾರಣ ತಮ್ಮ ಮಗ ಮತ್ತು ಮಗಳ ಜೊತೆಯಲ್ಲಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
Advertisement
ಸೋದೆ ವಾದಿರಾಜ ಮಠವು ಉಡುಪಿಯ ಅಷ್ಠ ಮಠಗಳಲ್ಲೊಂದಾಗಿದ್ದು ಉಪೇಂದ್ರ ಕುಟುಂಬದ ಗುರು ಮಠವಾಗಿದೆ. ಉಪೇಂದ್ರರವರು ಮದುವೆಯಾಗಿದ್ದು ಬೆಂಗಾಲಿ ಮೂಲದ ಹುಡುಗಿ ಪ್ರಿಯಾಂಕರನ್ನು ಆದರೂ ದೇವರ ಬಗ್ಗೆ ಹೆಚ್ಚು ನಂಬಿಕೆ ಇರುವ ಉಪೇಂದ್ರ ಅವರು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡ ಬಂದಿದ್ದಾರೆ. ಬ್ರಾಹ್ಮಣರಲ್ಲಿ ಗಂಡುಮಕ್ಕಳಿಗೆ 13 ವರ್ಷ ತುಂಬುವುದರೊಳಗಾಗಿ ಬಹ್ಮೋಪದೇಶ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ಅವರು ತಮ್ಮ ತಂದೆ ಸ್ಥಾನದ ಕರ್ತವ್ಯ ನಿಭಾಯಿಸಿದ್ದು ಮಗನ ಉಪನಯನ ಕಾರ್ಯದ ದಿನಾಂಕ ನಿಗದಿ ಆಗಬೇಕಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv