ಚಿಕ್ಕೋಡಿ: ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆಯುತ್ತಿದ್ದ ಹೈಟೆಕ್ ಅಕ್ರಮ ಕಳ್ಳಬಟ್ಟಿ ದಂಧೆಯ ಜಾಲವನ್ನು ಭೇದಿಸುವಲ್ಲಿ ಕುಡಚಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಳ್ಳಬಟ್ಟಿ ಅಡ್ಡೆಯ ಮೇಲೆ ದಿಢೀರ್ ದಾಳಿ ನಡೆಸಿರುವ ಪೊಲೀಸರು, ಭಾರಿ ಪ್ರಮಾಣದ ಕಳ್ಳಭಟ್ಟಿ ಸಾರಾಯಿ ಹಾಗೂ ಕಚ್ಚಾ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಒಟ್ಟು 1,790 ಲೀಟರ್ ಬೆಲ್ಲದ ಕೊಳೆ (ಕಳ್ಳಬಟ್ಟಿ ತಯಾರಿಕಾ ಕಚ್ಚಾ ವಸ್ತು) ಮತ್ತು 10 ಲೀಟರ್ ತಯಾರಾಗಿದ್ದ ಕಳ್ಳಬಟ್ಟಿ ಸಾರಾಯಿಯನ್ನು (ಒಟ್ಟು 1,800 ಲೀಟರ್) ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಿವಂ ಅಸೋಸಿಯೇಟ್ಸ್ ವಂಚನೆ ಕೇಸ್ – ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಸಿಐಡಿ ಶಾಕ್!
ಈ ಹೈಟೆಕ್ ಅಕ್ರಮ ದಂಧೆಯ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.
