ಪೆದ್ದಿ ಸಿನಿಮಾ ( Peddi Cinema) ರಿಲೀಸ್ ಆಗೋವರೆಗೂ ಸುಮ್ಮನಿದ್ದ ನಟಿ ಜಾನ್ವಿ ಕಪೂರ್ (Janhvi Kapoor), ರಿಲೀಸ್ ಬಳಿಕ ತಮ್ಮನ್ನು ವಸ್ತುವಿನ ರೀತಿ ತೋರಿಸಿದ್ದಾರೆ ಎಂದು ಬೇಸರಿಸಿಕೊಂಡು ಪ್ರಚಾರದಿಂದಲೇ ದೂರ ಉಳಿದಿದ್ದರು. ಅತ್ಯಂತ ಗ್ಲ್ಯಾಮರ್ ಪಾತ್ರದಲ್ಲಿ ಶ್ರೀದೇವಿ ಪುತ್ರಿಯನ್ನು ತೋರಿಸಲಾಗಿದ್ದು ಹಳ್ಳಿ ಹುಡುಗಿ ಗೆಟಪ್‌ನಲ್ಲೇ ಉಡುಗೆ ತೊಡುಗೆಯಿದ್ದರೂ ಮೈಮಾಟ ಪ್ರದರ್ಶಿಸಲಾಗಿದೆ. ಈ ಕಾಣರಕ್ಕೆ ಚಿತ್ರ ರಿಲೀಸ್ ದಿನವೇ ರೊಚ್ಚಿಗೆದ್ದ ಜಾನ್ವಿ ಕಪೂರ್ ಫ್ಯಾನ್ಸ್ ಈ ಚಿತ್ರದ ನಿರ್ದೇಶಕ ಬುಚ್ಚಿಬಾಬುಗೆ ಕ್ಲಾಸ್ ತೆಗೆದುಕೊಂಡಿದ್ದರು. ಅಷ್ಟಕ್ಕೂ ಈ ಚಿತ್ರದ ನಟನೆಗಾಗಿ ಜಾನ್ವಿ ಪಡೆದ ಸಂಭಾವನೆ ಎಷ್ಟು ಹಾಗಾದ್ರೆ ಅನ್ನೋ ವಿಚಾರ ಇದೀಗ ಭಾರೀ ಮುನ್ನಲೆಗೆ ಬಂದಿದೆ.
ಇದುವರೆಗೆ ಬಾಲಿವುಡ್‌ನಲ್ಲೇ ನಟಿಸುತ್ತಿದ್ದ ಜಾನ್ವಿಗೆ ಇದು ತೆಲುಗಿನ ಎರಡನೇ ಚಿತ್ರ. ಈಗಾಗ್ಲೇ ಅವರು ದೇವರ ಚಿತ್ರದಲ್ಲಿ ನಟಿಸಿದ್ದರು. ಅದೂ ಕೂಡ ಬ್ರೇಕ್ ಕೊಡುವ ಪಾತ್ರವಾಗಿರಲಿಲ್ಲ. ಹೀಗೆ ಅವರು ಪಡೆದುಕೊಂಡ ತೆಲುಗಿನ ಎರಡನೇ ಪ್ರಾಜೆಕ್ಟ್ ಪೆದ್ದಿ. ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಕೊಂಡಿದ್ದ ಜಾನ್ವಿಗೆ ಈಗ ನಿರಾಸೆಯಾಗಿದೆ. ಇದನ್ನೂ ಓದಿ: ಜಾನ್ವಿ ಕಪೂರ್ ಪೆದ್ದಿ ಸೌಂದರ್ಯಕ್ಕೆ ಕತ್ತರಿ
ಈ ಚಿತ್ರಕ್ಕೆ ಜಾನ್ವಿ ಕಪೂರ್ ಭರ್ತಿ 8 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಹಿಂದೆ ದೇವರ ಚಿತ್ರದ ನಟನೆಗೆ 5 ಕೋಟಿ ರೂ. ಸಂಭಾವನೆ ಕೇಳಿದ್ದರಂತೆ. ಶ್ರೀದೇವಿ ಪುತ್ರಿಯಾಗಿದ್ದರೂ ಇದುವರೆಗೂ ಬಾಲಿವುಡ್‌ನಲ್ಲಿ ಬ್ರೇಕ್ ಪಡೆಯಲೇ ಇಲ್ಲ. ದೊಡ್ಡ ಹಿಟ್ ಕೊಟ್ಟ ನಟಿ ಎಂದು ಕರೆಸಿಕೊಳ್ಳಲೇ ಇಲ್ಲ.
ಖ್ಯಾತ ಸಿನಿಮಾ ಹಿನ್ನೆಲೆ ಕುಟುಂಬದಿಂದ ಬಂದ ಜಾನ್ವಿಯನ್ನು ಪೆದ್ದಿಯಲ್ಲಿ ವಸ್ತು ರೀತಿ ಬಳಸಿಕೊಂಡಿದ್ದಾರೆ ಅನ್ನೋದು ಫ್ಯಾನ್ಸ್ ಪೇಜ್‌ಗಳಿಂದ ಬರುತ್ತಿರುವ ಒಕ್ಕೊರಲಿನ ಆಕ್ರೋಶ. ಈ ಹಿನ್ನೆಲೆ ಪೆದ್ದಿಯಲ್ಲಿ ತೋರಿಸಿರುವ ವಿಚಾರ ಟಾಲಿವುಡ್‌ನಿಂದ ಬಾಲಿವುಡ್ ವರೆಗೂ ಪರ ವಿರೋಧ ಚರ್ಚೆ ಮಾಡುತ್ತಿದ್ದಾರೆ. ಇದೀಗ ಪಾತ್ರ ಟೀಕೆಗೆ ಗುರಿಯಾದ ಬಳಿಕ ಜಾನ್ವಿ ಕಪೂರ್ ಇದಕ್ಕಾಗಿ ಪಡೆದುಕೊಂಡಿರುವ ಸಂಭಾವನೆಯ ವಿಚಾರ ಚರ್ಚೆಯ ಕೇಂದ್ರಬಿಂದುವಾಗಿದೆ. ಇದನ್ನೂ ಓದಿ: ಮುಖ್ಯಮಂತ್ರಿ ಹೆಸರಿನಲ್ಲೇ ಓಂ ಸಾಯಿ ಪ್ರಕಾಶ್ ಸಿನಿಮಾ
