ಹಾಸನ: ಚಿಕ್ಕಮಗಳೂರು – ಹಾಸನ (Chikkamagaluru -Hassan) ಗಡಿ ಭಾಗದಲ್ಲಿ ನರಹಂತಕ ಜೋಡಿ ಸಲಗಳ (Elephant) ಸೆರೆಗೆ ಇಂದು (ನ.19) ಸಹ ಕಾರ್ಯಾಚರಣೆ ಮುಂದುವರಿದಿದೆ.
ಬುಧವಾರ ಇಡೀ ದಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ಅನೆ ಸೆರೆಗೆ ಕಾರ್ಯಾಚರಣೆ ನಡೆದಿತ್ತು. ಇಡೀ ದಿನ ಪ್ರಯತ್ನಪಟ್ಟರೂ ಕಾಡಾನೆಗಳು ಸಿಗದೆ ಪರಾರಿಯಾಗಿದ್ದವು. ಇದನ್ನೂ ಓದಿ: ಬೇಲೂರಿನಲ್ಲಿ 2ನೇ ದಿನವೂ ವಿಫಲವಾದ ಕಾಡಾನೆ ಸೆರೆ ಕಾರ್ಯಾಚರಣೆ
ಕೆಲವು ತಿಂಗಳಿಂದ ಜೊತೆ ಜೊತೆಯಾಗಿ ಎರಡು ಪುಂಡಾನೆಗಳು ಓಡಾಡುತ್ತಿವೆ. ಇದೇ ಆನೆಗಳಿಂದ ಇಬ್ಬರು ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಾಗಾಗಿಯೇ ಈ ಆನೆಗಳನ್ನೇ ಮೊದಲು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ.
ರಾತ್ರಿಯಿಡೀ ಅರೆಹಳ್ಳಿ, ಬಿಕ್ಕೋಡು ಭಾಗದಲ್ಲಿ ಈ ಸಲಗಗಳು ಓಡಾಡಿವೆ. ಇವು ಎಲ್ಲಿಯೂ ನಿಲ್ಲದೆ ಓಡಾಡುತ್ತಿವೆ. ಆನೆ ಬೆನ್ನಟ್ಟಿದರೂ ಕಾರ್ಯಾಚರಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿ ಇವು ಎಸ್ಕೇಪ್ ಆಗುತ್ತಿವೆ. ಸತತ ಮೂರು ದಿನಗಳಿಂದ ಆನೆ ಸೆರೆ ಹಾಗೂ ಸ್ಥಳಾಂತರ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ವಿಜಯಪುರ | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ
