`ಅಮರನ್’ ಹಿಟ್ ಚಿತ್ರದ ಬಳಿಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿರುವ ಚಿತ್ರವೇ `ಡಿ-55′, ಇದು ಧನುಶ್ (Dhanush) ನಟನೆಯ ಚಿತ್ರ, ಈಗಾಗ್ಲೇ ಸಿನಿಮಾ ಸೆಟ್ಟೇರಿದ್ದು ಚಿತ್ರಕ್ಕಿನ್ನೂ ಅಧಿಕೃತ ಟೈಟಲ್ ಘೋಷಣೆ ಆಗಿಲ್ಲ.
ಇದೇ ಚಿತ್ರದ ವಿಶೇಷ ಪಾತ್ರದ ಮೂಲಕ ಮಮ್ಮುಟ್ಟಿ ಕೂಡ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಾಯಿ ಪಲ್ಲವಿ (Sai Pallavi) ನಾಯಕಿ ಎನ್ನಲಾಗುತ್ತಿದ್ದು, ಜೊತೆಗೆ ಇನ್ನೋರ್ವ ನಾಯಕಿಯಾಗಿ ಶ್ರೀಲೀಲಾ ಹೆಸರು ಮುಂಚೂಣಿಯಲ್ಲಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಕಾಪ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದೇ ಕುತೂಹಲ. ಇದನ್ನೂ ಓದಿ: ಮೂಕಾಂಬಿಕೆ ಸನ್ನಿಧಿಗೆ ಸಿಎಂ ವಿಜಯ್ : ಎಂಜಿಆರ್, ಜಯಲಲಿತಾ ಕೊಲ್ಲೂರಿಗೆ ನೀಡಿದ್ದೇನು?

ಈಗಾಗಲೇ ಚಿತ್ರೀಕರಣ ನಡೆಯುತ್ತಿದ್ದು, ಮುಂದಿನ ಶೆಡ್ಯೂಲ್‌ನಲ್ಲಿ ಸಾಯಿ ಪಲ್ಲವಿ ಎಂಟ್ರಿಯಾಗಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕನ್ನಡದ `8’ ಸಿನಿಮಾದಲ್ಲಿ ಅನುರಾಗ್ ಕಶ್ಯಪ್ : ಗ್ಲಿಂಪ್ಸ್ ರಿಲೀಸ್
`ಮಾರಿ-2′ ಚಿತ್ರದ ಹಿಟ್ ಜೋಡಿ ಧನುಶ್ ಹಾಗೂ ಸಾಯಿ ಪಲ್ಲವಿ ಇದೀಗ ಡಿ55 (D55) ಚಿತ್ರದಲ್ಲಿ ಒಂದಾಗ್ತಿರೋದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅದ್ರಲ್ಲೂ ಸಾಯಿ ಪಲ್ಲವಿ ಇಲ್ಲಿ ಕಾಪ್ ಪಾತ್ರ ಮಾಡ್ತಾರೆ ಅನ್ನೋದು ಇನ್ನಷ್ಟು ನಿರೀಕ್ಷಿತ ಸಂಗತಿ. ಪ್ರತಿ ಚಿತ್ರದಲ್ಲೂ ಸವಾಲಿನ ಪಾತ್ರವನ್ನೇ ಮಾಡುವ ಸಾಯಿ ಪಲ್ಲವಿ ಮೊದಲ ಬಾರಿಗೆ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ.

ಇದೊಂದು ಕ್ರೈಂ ಥಿಲ್ಲರ್ ಸಸ್ಪೆನ್ಸ್ ಕಥೆಯ ಚಿತ್ರವಾಗಿದ್ದು ರಾಜ್‌ಕುಮಾರ್ ಈಗಾಗ್ಲೇ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಇವರ ಈ ಹಿಂದಿನ ʻಅಮರನ್ʼ ಚಿತ್ರದಲ್ಲಿ ಸಾಯಿಪಲ್ಲವಿ ನಟಿಸಿದ್ದರು. ಈ ಬಾರಿ ಹೊಸ ರೀತಿಯ ಪಾತ್ರದಲ್ಲಿ ಅಂದ್ರೆ ಆ್ಯಕ್ಷನ್ ಲುಕ್‌ನ್ನ ಒಳಗೊಂಡ ಮಾಸ್ ಪಾತ್ರದಲ್ಲಿ ಹೇಗೆ ಕಾಣಿಸ್ತಾರೆ ಅನ್ನೋದೇ ಬಹಳ ಕುತೂಹಲಕಾರಿ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್; ನಟ ದರ್ಶನ್ ಬಂಧನವಾಗಿ ಇಂದಿಗೆ 2 ವರ್ಷ
