ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ನಟ ದರ್ಶನ್ (Darshan) ಬಂಧನವಾಗಿ ಇಂದಿಗೆ ಬರೋಬ್ಬರಿ 2 ವರ್ಷ ತುಂಬಿದೆ.
ಕೊಲೆ ಕೇಸಲ್ಲಿ 2025ರ ಜೂನ್ 11 ರಂದು ನಟ ದರ್ಶನ್ ಅರೆಸ್ಟ್ ಆಗಿದ್ದರು. ಮೈಸೂರಿನಲ್ಲಿ ಹೋಟೆಲ್‌ನಲ್ಲಿದ್ದಾಗಲೇ ನಟನನ್ನು ಎಸಿಪಿ ಚಂದನ್ ಕುಮಾರ್ ಬಂಧಿಸಿದ್ದರು. ಇದನ್ನೂ ಓದಿ: ಬೋಟ್‌ನಲ್ಲಿ ನಿಂತು ದೂರದ ದ್ವೀಪ ನೋಡ್ತಿರೋ ದರ್ಶನ್ – ಇನ್‌ಸ್ಟಾದಲ್ಲಿ ವಿಜಯಲಕ್ಷ್ಮಿ ಸ್ಟೋರಿ ಪೋಸ್ಟ್
ಜೈಲು ಸೇರಿ ಒಂದು ಬಾರಿ ಮಧ್ಯಂತರ ಜಾಮೀನು ಪಡೆದು ನಟ ಹೊರಬಂದಿದ್ದರು. ಅದಾದ ಬಳಿಕ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾಗಿತ್ತು. ದರ್ಶನ್ ಸೇರಿ ಏಳು ಜನ ಆರೋಪಿಗಳು ಮತ್ತೆ ಜೈಲುಪಾಲಾಗಿದ್ದರು.
ಕಳೆದ ಒಂದು ವರ್ಷದಿಂದ ನಟ ದರ್ಶನ್ ಮತ್ತು ಗ್ಯಾಂಗ್ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ. ಬಹುತೇಕ ಕಳೆದ ಎರಡು ವರ್ಷಗಳಿಂದ ನಟ ದರ್ಶನ್ ಜೈಲಲ್ಲಿದ್ದಾರೆ. ಇದನ್ನೂ ಓದಿ: ಸುಪ್ರೀಂ ನಲ್ಲಿ ಬೇಲ್ ಸಿಗದೇ ಮೌನಕ್ಕೆ ಜಾರಿದ ʻಗಜʼ – ವಿಜಯಲಕ್ಷ್ಮಿ ದರ್ಶನ್ ʻಹಾರ್ಟ್ ಬ್ರೇಕ್ʼ!
