ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ (Darshan) ಕಾನೂನು ಹೋರಾಟದಲ್ಲಿ ಒಂದರ ಮೇಲೊಂದರಂತೆ ಹಿನ್ನಡೆಯಾಗ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಇನ್ನೂ 1 ವರ್ಷದವರೆಗೆ ಬೇಲ್ ಸಿಗುವುದಿಲ್ಲವಾಗಿದ್ದು, ಜೈಲಿನಿಂದ ಹೊರಬರ್ತಾರೆ ಅಂತ ಕಾಯ್ತಿದ್ದ ದಚ್ಚು ಫ್ಯಾಮಿಲಿಗೆ ದೊಡ್ಡ ಶಾಕ್ ನೀಡಿದೆ.

ಪರಪ್ಪನ ಅಗ್ರಹಾರದ (Parappana Agrahara) ಕ್ವಾರಂಟೈನ್ ಜೈಲಿನ ಬ್ಯಾರಕ್‌ನಲ್ಲಿರುವ ಡಿ-ಬಾಸ್ ಯಾರೊಂದಿಗೂ ಮಾತನಾಡದೇ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಬ್ಯಾರಕ್‌ನ ಮೂಲೆಯೊಂದರಲ್ಲಿ ಏಕಾಂಗಿಯಾಗಿ ಕುಳಿತು ಕಾಲ ಕಳೆಯುತ್ತಿದ್ದಾರೆ.

ಇದರ ನಡುವೆ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ ಜೈಲಿನ ಊಟವೂ ಒಗ್ಗುತ್ತಿಲ್ಲ. ಸರಿಯಾಗಿ ನಿದ್ದೆಯೂ ಬಾರದೇ ದೈಹಿಕವಾಗಿಯೂ ದಚ್ಚು ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ. ಇತ್ತ ಪತಿ ಜೈಲಿನಲ್ಲಿ ನರಳುತ್ತಿದ್ದರೆ, ಅತ್ತ ಪತ್ನಿ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ನೆನಪಿನಲ್ಲಿ ದಿನದೂಡುತ್ತಿದ್ದಾರೆ.

ದರ್ಶನ್ ಅವರ ಪರಿಸ್ಥಿತಿ ಕಂಡು ಕರಗಿ ಹೋಗಿರುವ ವಿಜಯಲಕ್ಷ್ಮಿ, ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ದರ್ಶನ್ ಫೋಟೋ ಹಾಕಿ, ಹಾರ್ಟ್ ಬ್ರೇಕ್ ಇಮೋಜಿ ಪೋಸ್ಟ್ ಮಾಡಿ ಕಣ್ಣೀರು ಹಾಕಿದ್ದಾರೆ. ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿ ಮುಂದಿನ ದಾರಿ ಕಾಣದೆ ದರ್ಶನ್ ಕುಟುಂಬ ಈಗ ಸಂಪೂರ್ಣ ಕಂಗಾಲಾಗಿದೆ.

