– ಒಂದೆರಡು ಹಳ್ಳಿಗಳ ನೋಟಿಫೈಗೆ ರೈತರ ಮನವಿ: ಡಿ.ಕೆ.ಶಿವಕುಮಾರ್ ಮಾಹಿತಿ
ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಬಾಕಿ ಇರುವ ಹಳ್ಳಿಗಳಿಗೂ ಭೂಸ್ವಾಧೀನಕ್ಕೆ ಫೈನಲ್ ನೋಟಿಫಿಕೇಶನ್ ಹೊರಡಿಸೋದಾಗಿ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುಮಾರು 250ಕ್ಕೂ ಹೆಚ್ಚು ರೈತರು ತಮ್ಮನ್ನು ಭೇಟಿಯಾಗಿ ಟೌನ್‌ಶಿಪ್‌ಗೆ ಬೆಂಬಲ ಸೂಚಿಸಿದ್ದಾರೆ. ನಾವು ಜಮೀನು ಕೊಡೋಕೆ ಸಿದ್ಧವಿದ್ದೇವೆ. ಕೆಲವು ಹಳ್ಳಿಗಳನ್ನು ಫೈನಲ್ ನೋಟಿಫಿಕೇಶನ್ ಮಾಡೋಕೆ ಮನವಿ ಸಲ್ಲಿಸಿದ್ದಾರೆ ಅಂತಲೂ ಸಿಎಂ ಡಿಕೆಶಿ ಹೇಳಿದ್ದಾರೆ.
ಜೆಡಿಎಸ್ ಪಾದಯಾತ್ರೆಯಲ್ಲಿ 160 ರೈತರಷ್ಟೇ ಭಾಗಿಯಾಗಿದ್ದರು. ಉಳಿದವರು ಪಕ್ಷದ ಕಾರ್ಯಕರ್ತರು ಅಂತ ವ್ಯಂಗ್ಯವಾಡಿದ್ರು. ಇನ್ನು, ಜೆಡಿಎಸ್ ಪಾದಯಾತ್ರೆಯನ್ನು ಪೋಸ್ಟರ್ ಮೂಲಕ ಕಾಂಗ್ರೆಸ್ ವ್ಯಂಗ್ಯಮಾಡಿದೆ. ಜೆಡಿಎಸ್ ಕಚೇರಿ ಜೆಪಿ ಭವನದ ಗೋಡೆ, ಗೇಟ್ ಮೇಲೆ ಪೋಸ್ಟರ್ ಅಂಟಿಸಿ ದಳಪತಿಗಳ ವಿರುದ್ಧ ಯೂತ್ ಕಾಂಗ್ರೆಸ್ ಕ್ಯಾಂಪೇನ್ ನಡೆಸಿದ್ರು. ಮೊದಲು ನಿಮ್ಮ ಬೇನಾಮಿ ಆಸ್ತಿ ಬಿಡಿ. ಆಮೇಲೆ ರೈತರ ಪರ ಮಾತಾಡಿ ಎಂದು ಪೋಸ್ಟರ್ ಹಚ್ಚಲಾಗಿತ್ತು. ಪೋಸ್ಟರ್ ಅಂಟಿಸಿದ ಕೈ ಕಾರ್ಯಕರ್ತರ ವಿರುದ್ಧ ಜೆಡಿಎಸ್ ಕಾನೂನು ಘಟಕ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ.
ಮತ್ತೊಂದೆಡೆ ಪಾದಯಾತ್ರೆಗೆ ಸಹಕಾರ ನೀಡಿದ ಎಲ್ಲರಿಗೂ ನಿಖಿಲ್ ಕುಮಾರಸ್ವಾಮಿ ಧನ್ಯವಾದ ತಿಳಿಸಿದ್ದಾರೆ. ಈ ಮಧ್ಯೆ ಬಿಡದಿ ಹೋರಾಟದಲ್ಲಿ ಒಗ್ಗಟ್ಟು ಇಲ್ಲದ ಬಗ್ಗೆ ವೈರಲ್ ವಿಡಿಯೋ ಬಗ್ಗೆ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ನಿಖಿಲ್ ನೇತೃತ್ವದ ಪಾದಯಾತ್ರೆಗೆ ಬಿಜೆಪಿ ಕಡೆಯಿಂದ ಗೊಂದಲ ಇಲ್ಲ. ನಾನು ನನ್ನ ಹೇಳಿಕೆಗೆ ಬದ್ಧ ಇದೀನಿ ಎಂದಿದ್ದಾರೆ.

