ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಕೃಷ್ಣ
ತಿಥಿ: ಪಂಚಮಿ
ನಕ್ಷತ್ರ: ರೋಹಿಣಿ
ರಾಹುಕಾಲ: 1:43 – 3:13
ಗುಳಿಕಕಾಲ: 9:13 – 10:43
ಯಮಗಂಡಕಾಲ: 6:12 – 7:43
ಮೇಷ: ಅಲಂಕಾರದ ಕಡೆಗೆ ಒತ್ತುಕೊಡುವಿರಿ, ಬಂಧುಗಳಿಂದ ಸಹಕಾರ, ತಲೆನೋವು ಕಾಡಬಹುದು.
ವೃಷಭ: ಆತ್ಮವಿಶ್ವಾಸದಿಂದ ಮುನ್ನಡೆಯಿರಿ, ವಿದ್ಯಾರ್ಥಿಗಳಿಗೆ ಉತ್ತಮ, ಆದಾಯವು ಸರಾಸರಿ.
ಮಿಥುನ: ರೈತರಿಗೆ ಶುಭ, ಆರೋಗ್ಯಕ್ಕಾಗಿ ಹಣವ್ಯಯ, ಧರ್ಮಕಾರ್ಯಗಳಿಗೆ ಬಂಧುಗಳಿಂದ ಸಹಕಾರ.
ಕಟಕ: ಸಾಧಿಸುವ ಉತ್ಸಾಹ ಜಾಸ್ತಿಯಾಗುತ್ತದೆ, ಋಣ ಮುಕ್ತರಾಗುವ ಸಾಧ್ಯತೆ, ಸ್ತ್ರೀಯರಿಗೆ ಅಪಮಾನ.
ಸಿಂಹ: ಧಾರ್ಮಿಕತೆ ಕಡೆಗೆ ಮನಸ್ಸಾಗುತ್ತದೆ, ಸರ್ಕಾರದಿಂದ ಬರಬೇಕಿದ್ದ ಹಣಕಾಸು ಪ್ರಾಪ್ತಿ, ಸೋದರಿಯರಿಂದ ವ್ಯವಹಾರದಲ್ಲಿ ಲಾಭ.
ಕನ್ಯಾ: ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಿ, ಉದ್ಯೋಗದಲ್ಲಿ ಆದಾಯ ಹೆಚ್ಚುವ ಸಂಭವ, ಆಸ್ತಿ ಕೊಳ್ಳಲು ಮಾರ್ಗ ಒದಗುತ್ತದೆ.
ತುಲಾ: ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸುವಿರಿ, ಆಸ್ತಿ ವಿಚಾರಗಳಲ್ಲಿ ಸಮಸ್ಯೆ, ರಾಜಕೀಯ ವ್ಯಕ್ತಿಗಳಿಗೆ ವರ್ಚಸ್ಸು ಲಭ್ಯ.
ವೃಶ್ಚಿಕ: ಬಂಧುಗಳು ನ್ಯಾಯ ತೀರ್ಮಾನಕ್ಕಾಗಿ ಕರೆಯುವರು, ರಿಯಲ್ ಎಸ್ಟೇಟ್ ಕೆಲಸಗಾರರಿಗೆ ಲಾಭ, ಪ್ರೇಮ ವಿವಾಹದಲ್ಲಿ ಶುಭ.
ಧನಸ್ಸು: ಬಂಧುಗಳೊಂದಿಗೆ ಭಿನ್ನಾಭಿಪ್ರಾಯ, ಕೃಷಿ ಭೂಮಿ ಅಭಿವೃದ್ಧಿಗಾರರಿಗೆ ಉತ್ತಮ, ಯಾವುದರಲ್ಲೂ ನಿರ್ಲಕ್ಷ್ಯವನ್ನು ಮಾಡಬೇಡಿ.
ಮಕರ: ಸಮಸ್ಯೆಗಳೊಂದಿಗೆ ಹೋರಾಡುವಿರಿ, ಭಾಷಣಕಾರರು ಮಾತನಾಡುವಾಗ ಎಚ್ಚರ, ವೃತ್ತಿ ಸಂಬಂಧ ಪರೀಕ್ಷೆಯಲ್ಲಿ ಶುಭ.
ಕುಂಭ: ವಕೀಲರಿಗೆ ಶುಭ, ನ್ಯಾಯಧೀಶರುಗಳಿಗೆ ಗೌರವ ಲಭ್ಯ, ಬಂಧುಗಳೊಂದಿಗಿನ ಸಾಮರಸ್ಯ ಯತ್ನ ವಿಫಲ.
ಮೀನ: ರಕ್ತದೊತ್ತಡದ ಸಮಸ್ಯೆ, ಬೆಣ್ಣೆ ಮಾರಾಟಗಾರರಿಗೆ ಅಲ್ಪಾದಾಯ, ಕಾನೂನು ವಿಷಯದಲ್ಲಿ ಶುಭ.

