ಪಣಜಿ: ಮುಂಬರುವ ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಕೊಂಕಣ ರೈಲ್ವೆಯು (Konkan Railway) 254 ವಿಶೇಷ ರೈಲುಗಳನ್ನು ಘೋಷಿಸಿದೆ.

ಸೆಪ್ಟೆಂಬರ್ 14 ರಂದು ಗಣೇಶ ಚತುರ್ಥಿಯೊಂದಿಗೆ ಹಬ್ಬ (Ganpati festival) ಪ್ರಾರಂಭವಾಗಲಿದೆ. ತಮ್ಮ ಊರುಗಳು ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ವಿಶೇಷ ರೈಲು ಸೇವೆ ಕಲ್ಪಿಸಲಾಗಿದೆ. ಇದನ್ನೂ ಓದಿ: ‘ವಂದೇ ಮಾತರಂ’ಗೆ ಅಪಮಾನ ಮಾಡಿದ್ರೆ ಶಿಕ್ಷೆ ವಿಧಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ
254 ವಿಶೇಷ ರೈಲುಗಳಲ್ಲಿ 246 ರೈಲುಗಳನ್ನು ಸೆ.11 ರಿಂದ 27 ರವರೆಗೆ ವಿವಿಧ ಮಾರ್ಗಗಳಲ್ಲಿ ಕೇಂದ್ರ ರೈಲ್ವೆಯ ಸಮನ್ವಯದೊಂದಿಗೆ ಓಡಿಸಲಾಗುವುದು ಎಂದು ಕೆಆರ್‌ಸಿಎಲ್ ಉಪ ಪ್ರಧಾನ ವ್ಯವಸ್ಥಾಪಕ ಬಬನ್ ಘಾಟ್ಗೆ ದಕ್ಷಿಣ ಗೋವಾದ ಮಾರ್ಗೋದಲ್ಲಿ ತಿಳಿಸಿದ್ದಾರೆ.
ಈ ರೈಲುಗಳು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ಮತ್ತು ಸಾವಂತವಾಡಿ, ರತ್ನಗಿರಿ, ಮಡಗಾಂವ್ ಮತ್ತು ಮಂಗಳೂರು ನಡುವೆ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್-ರತ್ನಗಿರಿ, ಎಲ್‌ಟಿಟಿ-ಮಡ್ಗಾಂವ್, ಎಲ್‌ಟಿಟಿ-ಮಂಗಳೂರು, ಪುಣೆ-ರತ್ನಗಿರಿ ಮತ್ತು ಪುಣೆ-ಸಾವಂತವಾಡಿ ಮಾರ್ಗಗಳಲ್ಲಿ ಓಡಲಿವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ: ಚೀನಾಗೆ ವಿದೇಶಾಂಗ ಸಚಿವಾಲಯ ಟಕ್ಕರ್
ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಎಂಟು ಹೆಚ್ಚುವರಿ ವಿಶೇಷ ರೈಲುಗಳು ಬಾಂದ್ರಾ ಟರ್ಮಿನಸ್ (ಮುಂಬೈ), ವಡೋದರಾ (ಗುಜರಾತ್), ವಿಶ್ವಾಮಿತ್ರಿ (ಗುಜರಾತ್), ಭೂಸಾವಲ್ (ಮಹಾರಾಷ್ಟ್ರ) ಮತ್ತು ವಲ್ಸಾದ್ (ಗುಜರಾತ್) ನಿಲ್ದಾಣಗಳಿಂದ ಹೊರಡಲಿವೆ. ಎಲ್ಲಾ ವಿಶೇಷ ರೈಲುಗಳ ಬುಕಿಂಗ್ ಪ್ರಾರಂಭವಾಗಿದೆ.
