ನವದೆಹಲಿ: ವಂದೇ ಮಾತರಂ (Vande Mataram Bill) ಗೀತೆಯನ್ನು ಅವಮಾನಿಸಿದರೆ ಶಿಕ್ಷೆ ವಿಧಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದಾರೆ.
ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ರಾಷ್ಟ್ರಗೀತೆ ‘ಜನ ಗಣ ಮನ’ದಂತೆ ಸಮಾನವಾದ ಕಾನೂನು ಸ್ಥಾನಮಾನ ನೀಡುವ ಹಾಗೂ ಗೀತೆಗೆ ಅವಮಾನ ಅಥವಾ ಅಡ್ಡಿಪಡಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ (ತಿದ್ದುಪಡಿ) ಮಸೂದೆ, 2026’ ಸಂಸತ್ತಿನಲ್ಲಿ ಈಚೆಗೆ ಅಂಗೀಕಾರಗೊಂಡಿತ್ತು. ಇದನ್ನೂ ಓದಿ: ‘ವಂದೇ ಮಾತರಂ’ಗೆ ಅವಮಾನ ಮಾಡಿದ್ರೆ 3 ವರ್ಷ ಜೈಲು – ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ
ಲೋಕಸಭೆಯು ಜುಲೈ 30 ರಂದು ಮಸೂದೆಯನ್ನು ಅಂಗೀಕರಿಸಿತ್ತು. ರಾಜ್ಯಸಭೆಯು ಒಂದು ದಿನ ಮುಂಚಿತವಾಗಿ ಅದನ್ನು ಅಂಗೀಕರಿಸಿತ್ತು. ಮಸೂದೆ ಈಗ ರಾಷ್ಟ್ರಪತಿಗಳ ಅಂಕಿತ ಪಡೆದು ಕಾನೂನಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಮೊದಲ ಬಾರಿಗೆ ಕೆಂಪು ಕೋಟೆಯಲ್ಲಿ ವಂದೇ ಮಾತರಂ ಹಾಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: Independence Day | ಕೆಂಪುಕೋಟೆಯಲ್ಲಿ ಫಸ್ಟ್ ಟೈಮ್ ಮೊಳಗಲಿದೆ ‘ವಂದೇ ಮಾತರಂ’ ಗಾಯನ

