ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ತಮ್ಮ ತಲೆಗೂದಲು ವಿಚಾರಕ್ಕೆ ಫುಲ್ ಟ್ರೋಲ್ ಆಗಿದ್ದಾರೆ.
ಟೂರ್ನಿಯಲ್ಲಿ ಕಳಪೆ ಫಾರ್ಮ್‌ನಲ್ಲಿರುವ ತಂಡಕ್ಕೆ ಇದೀಗ ಟ್ರೋಲಿಗರ ಕಾಟವೂ ಹೆಚ್ಚಾಗ್ತಿದೆ. ಇದರ ಮಧ್ಯೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ವಿರುದ್ಧ ಭೀಕರ ಟ್ರೋಲ್ ನಡೆಯುತ್ತಿದೆ. ಕಿಂಗ್ ಚಾರ್ಲ್ಸ್ ಭೇಟಿಯಾಗಲು ಬಂದಾಗ ಅವರ ಲುಕ್ ನೆಟ್ಟಿಗರ ಟ್ರೋಲಿಂಗ್‌ಗೆ ಕಾರಣವಾಗಿದೆ.
ಬಾಬರ್ ಅವರು ಬಿಳಿ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಆದರೆ, ಅವರ ಉಡುಪಿಗಿಂತಲೂ ಗಮನ ಸೆಳೆದಿದ್ದು ಅವರ ಜೆಟ್ ಬ್ಲ್ಯಾಕ್ ಕೂದಲು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು, ಬಾಬರ್ ಕೂದಲಿಗೆ 15 ರೂ. ಡೈ ಹಾಕಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೊಂದೆಡೆ, ಕಿಂಗ್ ಚಾರ್ಲ್ಸ್ ಅವರಂತಹ ಉನ್ನತ ಮಟ್ಟದ ವ್ಯಕ್ತಿಯನ್ನು ಭೇಟಿಯಾಗುವ ಸಂದರ್ಭದಲ್ಲಿ ಬಾಬರ್ ಅಜಂ ಸೇರಿದಂತೆ ಪಾಕಿಸ್ತಾನ ಆಟಗಾರರು ಕ್ಯಾಶುವಲ್ ಡ್ರೆಸ್‌ನಲ್ಲಿ ಬಂದಿರುವುದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
