ನವದೆಹಲಿ: ಅರುಣಾಚಲ ಪ್ರದೇಶ (Arunachal Pradesh) ಭಾರತದ ಅವಿಭಾಜ್ಯ ಅಂಗ. ಈ ವಾಸ್ತವವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಚೀನಾಗೆ (China) ಮತ್ತೆ ಭಾರತ ಟಕ್ಕರ್ ಕೊಟ್ಟಿದೆ.
ಭಾರತದ (India) ನಕ್ಷೆಗೆ ಅರುಣಾಚಲ ಪ್ರದೇಶದ 27 ಸ್ಥಳಗಳ ಸೇರ್ಪಡೆಗೆ ಚೀನಾ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಇದು ಅಕ್ರಮ ಎಂದು ಕರೆದಿತ್ತು. ಚೀನಾದ ಆಕ್ಷೇಪಣೆಯನ್ನು ಭಾರತದ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ. ಇದನ್ನೂ ಓದಿ: ಚೀನಾಗೆ ಟಕ್ಕರ್; ಭಾರತದ ನಕ್ಷೆಗೆ ಅರುಣಾಚಲ ಪ್ರದೇಶದ 27 ಸ್ಥಳಗಳ ಸೇರ್ಪಡೆ
ಅರುಣಾಚಲ ಪ್ರದೇಶ ಭಾರತದ ಬೇರ್ಪಡಿಸಲಾಗದ ಮತ್ತು ಅವಿಭಾಜ್ಯ ಅಂಗ. ಇದು ಸ್ಪಷ್ಟವಾದ ಸತ್ಯ. ಈ ವಾಸ್ತವವನ್ನು ಯಾವುದೂ ಬದಲಾಯಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಚೀನಾದ ಆಕ್ಷೇಪಣೆಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಭಾರತದ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳನ್ನು ಚೀನಾ ಪದೇ ಪದೇ ಮರುನಾಮಕರಣ ಮಾಡುತ್ತಿದೆ. ಕಳೆದ ವಾರ ಭಾರತದ ಅಧಿಕೃತ ನಕ್ಷೆಯಲ್ಲಿ ರಾಜ್ಯದ 27 ಸ್ಥಳಗಳನ್ನು ಔಪಚಾರಿಕವಾಗಿ ಗುರುತಿಸಲಾಗಿದೆ. ಇದನ್ನೂ ಓದಿ: ರಷ್ಯಾ-ಭಾರತ ನಡುವೆ ಹೊಸ ರೈಲು ಮಾರ್ಗದ ಪ್ಲ್ಯಾನ್; ಪಾಕ್, ಅಫ್ಘಾನ್ ಮೂಲಕ ಹಿಂದೂ ಮಹಾಸಾಗರಕ್ಕೆ ಸಂಪರ್ಕ

