– ಕೂಲಿ ಕೆಲಸಕ್ಕೆ ಹೋದ ಆರು ಜನ ಬಡಪಾಯಿ ಮಹಿಳೆಯರು ಮಸಣಕ್ಕೆ
ಬೀದರ್: ತೆಲಗಾಂಣದ ಜಹೀರಾಬಾದ್ ಬಳಿಯ ಮೊಗುಡಂಪಳ್ಳಿ (ಎಂ)ಯ ಸತ್ವಾರ್ ಗ್ರಾಮದ ಹೊರವಲಯದಲ್ಲಿ ಟ್ಯಾಂಕರ್ ಲಾರಿ ಮತ್ತು ಆಟೋ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ಆರು ಮಂದಿ ಮೃತಪಟ್ಟಿದ್ದಾರೆ. ಕೂಲಿ ಕೆಲಸಕ್ಕೆಂದು ಆಟೋದಲ್ಲಿ ಜಹೀರಾಬಾದ್‌ಗೆ ಮಹಿಳೆಯರು ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ಅವಘಡ ಸಂಭವಿಸಿದೆ. ಆಟೋದಲ್ಲಿ ಉಳಿದ ಏಳು ಜನರ ಸ್ಥಿತಿ ಗಂಭೀರವಾಗಿದೆ.
ಮೃತರನ್ನು ರಾಜಗೀರಾ ಗ್ರಾಮದ ರೇಖಾ, ಶ್ರೀದೇವಿ, ಕವಿತಾ, ರೇಷ್ಮಾ ಮತ್ತು ಆಟೋ ಚಾಲಕ ದೇವದಾಸ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ನಿರ್ಮಲಾ, ನಿಕಿತಾ, ಚಂದ್ರಕಲಾ, ರಾಧಿಕಾ, ಶಿಲ್ಪಾ ಮತ್ತು ಶೋಭಾ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಜಹೀರಾಬಾದ್‌ನಲ್ಲಿ ಪ್ರಥಮ ಚಿಕಿತ್ಸೆಯ ನಂತರ ಸಂಗರೆಡ್ಡಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

