ಪಾಟ್ನಾ: ಬಿಹಾರದಲ್ಲಿ ನಡೆದ ಅಪ್ರಾಪ್ತ ಬಾಲಕಿ ಮತ್ತು ಬಾಲಕನ ಮೇಲಿನ ಹಲ್ಲೆ ಹಾಗೂ ಲೈಂಗಿಕ ಕಿರುಕುಳದ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 19 ರಂದು ಬಿಹಾರದ ಜಮುಯಿ ಜಿಲ್ಲೆಯಲ್ಲಿ(Jamui Harassment Case) ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
10ನೇ ತರಗತಿಯ ಅಪ್ರಾಪ್ತ ಜೋಡಿ ಕೋಚಿಂಗ್ (Coaching Class) ಕ್ಲಾಸ್ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಪುಂಡರ ಗುಂಪೊಂದು ಅವರನ್ನು ರಸ್ತೆಯಲ್ಲೇ ತಡೆದಿದೆ.
ಗುಂಪು ಬಾಲಕನ ಮೇಲೆ ಹಲ್ಲೆ ನಡೆಸಿ, ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದೆ. ಬಾಲಕಿ ಕೈಮುಗಿದು ಬಿಡುವಂತೆ ಬೇಡಿಕೊಂಡರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಬಲವಂತವಾಗಿ ಎಳೆದೊಯ್ದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋ ವೈರಲ್ ಆಗಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಜಮುಯಿ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಡಿಯೋ ಆಧಾರದ ಮೇಲೆ ಘಟನೆಯಲ್ಲಿ ಭಾಗಿಯಾದ ಸುಮಾರು 7 ಜನ ಪುಂಡರನ್ನು ಪೊಲೀಸರು ಗುರುತಿಸಿದ್ದಾರೆ. ಉಳಿದ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಐಐಟಿ ಬಾಂಬೆ ವಿದ್ಯಾರ್ಥಿ ಸಾವು ಕೇಸ್ – ಪ್ರೊ. ದೂಲ್ಲಾ ಬೆಂಬಲಕ್ಕೆ ನಿಂತ ಪ್ರಾಧ್ಯಾಪಕರು
#WATCH | Jamui, Bihar | SP Vishwajit Dayal says, “A video went viral this morning, and we received it as well. Based on that video, we identified the victim and recorded her statement. It was revealed that the incident took place around 7 PM on the 19th, showing some youths from… pic.twitter.com/SMLMkjCFsc
— ANI (@ANI) September 21, 2026
ಈ ಪ್ರಕರಣದ ಸಂಪೂರ್ಣ ತನಿಖೆಗಾಗಿ ಮಹಿಳಾ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪೊಕ್ಸೊ (POCSO) ಕಾಯ್ದೆಯಡಿ ಕಠಿಣ ಪ್ರಕರಣಗಳನ್ನು ದಾಖಲಿಸಲಾಗಿದೆ.
ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ರಾತ್ರಿಯ ವೇಳೆ ಜನರ ಗುಂಪೊಂದು ಇಬ್ಬರು ಹದಿಹರೆಯದವರನ್ನು ಸುತ್ತುವರೆದಿರುವುದು ಕಂಡುಬಂದಿದೆ. ಹಲವಾರು ಪುರುಷರು ಬಾಲಕಿಯನ್ನು ತಡೆದು ನಿಲ್ಲಿಸಿದ್ದರೆ, ಜೊತೆಗಿದ್ದ ಹುಡುಗನನ್ನು ಆಕೆಯಿಂದ ದೂರ ಸರಿಸಿರುವುದು ಕಾಣಿಸುತ್ತದೆ.
ಒಂದು ಹಂತದಲ್ಲಿ, ಮುಖ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಬಾಲಕಿಯ ಬಳಿ ಬಂದು ಆಕೆಯ ಕೆಳಭಾಗವನ್ನು ಹಿಡಿದು ಎತ್ತಿಕೊಳ್ಳುವುದು ಕಂಡುಬರುತ್ತದೆ. ಆಕೆ ಕಿರುಚುತ್ತಾ ಪ್ರತಿರೋಧ ಒಡ್ಡುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಹುಡುಗ ಮಧ್ಯಪ್ರವೇಶಿಸಲು ಯತ್ನಿಸುತ್ತಾನೆ. ನಂತರ ಅವರಿಬ್ಬರೂ ಆ ಸ್ಥಳದಿಂದ ತೆರಳುವುದು ಕಂಡುಬರುತ್ತದೆ.

