ಮಾಸ್ಕೋ: ದಕ್ಷಿಣ ರಷ್ಯಾದ (Southern Russia) ನೈಋತ್ಯ ಸೈಬೀರಿಯಾದ ಕೆಮೆರೊವೊ (Kemerovo) ಪ್ರದೇಶದಲ್ಲಿ ಸೇನಾ ಸಾರಿಗೆ ವಿಮಾನ ಪತನಗೊಂಡಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ.
ಮಂಗಳವಾರ (ನ.17) ಮಿಲಿಟರಿ An-12 ಸಾರಿಗೆ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 17 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಮಾಧ್ಯಮ ಸಂಸ್ಥೆ ಇಜ್ವೆಸ್ಟಿಯಾ ವರದಿ ಮಾಡಿದೆ. ಇದನ್ನೂ ಓದಿ: Video Viral | ಕ್ವಾಡ್ ನಾಯಕರ ಫೋಟೋಶೂಟ್ ವೇಳೆ ಭಾರತದ ಧ್ವಜದ ಗುರುತಿನ ಕಾರ್ಡ್ ಎತ್ತಿಕೊಂಡ ಮೋದಿ
ಸ್ಥಳೀಯ ಗವರ್ನರ್ ಇಲ್ಯಾ ಸೆರೆದ್ಯುಕ್ ಅವರು ತಮ್ಮ ಅಧಿಕೃತ ಚಾನೆಲ್ನಲ್ಲಿ ಪೋಸ್ಟ್ ಮೂಲಕ ತಿಳಿಸಿದ್ದು, ಯಾಗುನೊವೊ ಗ್ರಾಮದ ಬಳಿ ಈ ವಿಮಾನ ಪತನಗೊಂಡಿದೆ. ಅದರಲ್ಲಿದ್ದ ಎಲ್ಲಾ 17 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಅವರು ಅಪಘಾತಕ್ಕೀಡಾದ ವಿಮಾನ ಯಾವುದು ಎಂಬುದರ ಬಗ್ಗೆ ತಿಳಿದಿಲ್ಲ.
