ಬಿಗ್‌ಬಾಸ್ ಅಖಾಡದಲ್ಲಿ ದಿನೇ ಕಿಚ್ಚು ಹೆಚ್ಚುತ್ತಲೇ ಇದೆ. ಇದೀಗ ಮನೆ ಮಂದಿಯಲ್ಲೇ ಸೇರಿ ಮಂಜನನ್ನೇ ನೇರವಾಗಿ ಟಾರ್ಗೆಟ್ ಮಾಡಿದ್ದಾರೆ.
ಈ `ಮಿಡ್‌ವೀಕ್ ಎಲಿಮಿನೇಷನ್’ನಿಂದ ತಮ್ಮನ್ನು ತಾವು ಉಳಿಸಿಕೊಳ್ಳಲು ಮನೆಯ ಸದಸ್ಯರು ಪಣತೊಟ್ಟಿದ್ದು, ಮನೆಯ ಸದಸ್ಯರ ನೇರ ಗುರಿಯೇ ಮಾಡರ್ನ್ ಮಹಾಕವಿ ಮಂಜ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ‘Emergency Exit’ – ಸುದೀಪ್ ಸಡನ್ ಎಂಟ್ರಿ ಕೊಟ್ಟಿದ್ಯಾಕೆ?
ಮನೆ Vs Modern ಕವಿ ಮಂಜುನಾಥ್!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್‌ಫುಲ್‌ಕತೆ #colorfulstory #KichchaSudeepa #CKPromo #CK24x7 pic.twitter.com/PtTsHzIgOF
— Colors Kannada (@ColorsKannada) September 21, 2026
ಹಾಳೆಯ ಸಿಲಿಂಡರ್‌ಗಳನ್ನು ಕಾಲಿನಿಂದ ತುಳಿಯುವ ಟಾಸ್ಕ್ ಅನ್ನು ಬಿಗ್‌ಬಾಸ್ ನೀಡಿದ್ದರು. ಇದರಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ಒಬ್ಬರನ್ನು ಮನೆಯಿಂದ ಹೊರಗಿಡಬೇಕಿತ್ತು. ಈ ವೇಳೆ ಹೆಚ್ಚಿನ ಸ್ಪರ್ಧಿಗಳ ಕೈಯಲ್ಲಿದ್ದದ್ದು ಮಂಜು ಅವರ ಫೋಟೋ ಇರುವ ಡಬ್ಬಿಯೇ. ಸ್ಪರ್ಧಿ ಕಾವ್ಯ ಮಂಜು ಫೋಟೋ ಇರುವ ಡಬ್ಬಿ ತುಳಿಯುವಾಗ, ಮಂಜುಗೆ ಗೊತ್ತಿರೋದು ಒಂದೇ, ಅದು ಬೇರೆಯವರ ವ್ಯಕ್ತಿತ್ವಕ್ಕೆ ಕುತ್ತು ತರುವುದು ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ:ಬಿಗ್ ಬಾಸ್ ಬಿಗ್ ಟ್ವಿಸ್ಟ್: ಎಲಿಮಿನೇಷನ್‌ನಲ್ಲಿ ಕಿರಣ್, ಮಂಜ ಗಾಜು ಪುಡಿಪುಡಿ!
ಇಲ್ಲಿ ಗೇಮ್ ಆಡೋದಿಕ್ಕೆ ಇವನಿಗೆ ಅರ್ಹತೆಯೇ ಇಲ್ಲ. ಈ ಮನೆಯಿಂದ ಹೋಗಬೇಕಾಗಿರುವ ಏಕೈಕ ವ್ಯಕ್ತಿ ಮಂಜ ಎಂದು ರೋಷಾವೇಶದಿಂದ ಧನುಷ್ ಆ ಡಬ್ಬಿಯನ್ನು ಮೆಟ್ಟಿ ಪುಡಿಮಾಡಿದ್ದಾರೆ. ಇನ್ನೊಬ್ಬರ ಬೇಡಿಕೆಗಳನ್ನು, ಅವರ ವಿಚಾರ ಧಾರೆಗಳನ್ನು ನೀನು ತುಳಿಯೋಕೆ ಹೊರಟಿರುವಾಗ ನಿನ್ನನ್ನು ತುಳಿಯೋದ್ರಲ್ಲಿ ಯಾವ ತಪ್ಪೂ ಇಲ್ಲ ಎನ್ನುತ್ತಾ ಕಿರಣ್ ಶಾಸ್ತ್ರೀ ಕುಟುಕಿದ್ದಾರೆ.
ಇಡೀ ಮನೆಯೇ ಒಗ್ಗಟ್ಟಾಗಿ ಮಂಜು ವಿರುದ್ಧ ತಿರುಗಿಬಿದ್ದಿರುವಾಗ, ಮಿಡ್‌ವೀಕ್ ಎಲಿಮಿನೇಷನ್‌ನಿಂದ ಅವರು ಪಾರಾಗ್ತಾರಾ? ಎನ್ನೋದು ಕುತೂಹಲ.ಇದನ್ನೂ ಓದಿ: ಮಂಜನಿಗೆ ಹೊಡೆದು ಜೈಲಿಗೆ ಹೋದ ಸೌಂದರ್ಯ ಶೆಟ್ಟಿ

