ಬಿಗ್ಬಾಸ್ (Bigg Boss) ಮನೆಯಲ್ಲಿ ಎರಡನೇ ವಾರ ಕಳೆದು ಮೂರನೇ ವಾರಕ್ಕೆ ಕಾಲಿಟ್ಟಿದ್ದ ಸ್ಪರ್ಧಿಗಳಿಗೆ ದಿಢೀರ್ ಶಾಕ್ ಎದುರಾಗಿದೆ. ಏಕಾಏಕಿ ಸೈರನ್ ಮೊಳಗಿದ್ದು, ಗಾಢ ನಿದ್ದೆಯಲ್ಲಿದ್ದ ಎಲ್ಲರಿಗೂ ಬೆಚ್ಚಿಬೀಳಿಸಿದೆ.
ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ವಿಡಿಯೋದಲ್ಲಿ ಏಕಾಏಕಿ ಮನೆಯಲ್ಲೆಲ್ಲಾ ಕೆಂಪು ಬಣ್ಣ ಆವರಿಸಿ, ಸೈರನ್ ಮೊಳಗುತ್ತದೆ. ಇದರಿಂದ ಗಾಬರಿಯಿಂದ ಸ್ಫರ್ಧಿಗಳು ಎದ್ನೋ ಬಿದ್ನೋ ಎಂದು ಲಿವಿಂಗ್ ಏರಿಯಾಗೆ ಬರುತ್ತಾರೆ. ಕೂಡಲೇ ಕಿಚ್ಚ ಸುದೀಪ್ (Kichcha Sudeep) ಎಂಟ್ರಿ ಕೊಟ್ಟು, ಮನೆಯವರಿಗೆಲ್ಲ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಇದನ್ನೂ ಓದಿ: ಮೈಸಾ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮಾಸ್
ಈ ವಾರ ಮನೆಯಲ್ಲಿ EMERGENCY EXIT!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo #CK24x7 pic.twitter.com/QzpTGAKZKK
— Colors Kannada (@ColorsKannada) September 21, 2026
ಬೆಳಗಿನ ಜಾವ ಗಾಢ ನಿದ್ದೆಯಲ್ಲಿದ್ದ ಬಿಗ್ ಬಾಸ್ ಮನೆಯ ಸದಸ್ಯರನ್ನು ಡೇಂಜರ್ ಸೈರನ್ವೊಂದು ಬೆಚ್ಚಿಬೀಳಿಸಿದೆ. ನಿದ್ದೆಯಿಂದೆದ್ದ ಮನೆ ಮಂದಿ ಕಣ್ಣುಜ್ಜಿಕೊಂಡು ಲಿವಿಂಗ್ ಏರಿಯಾಗೆ ಬರುತ್ತಿದ್ದಂತೆ, ಟಿವಿ ಪರದೆಯ ಮೇಲೆ ಪ್ರತ್ಯಕ್ಷವಾಗಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಕ್ಲಾಸ್ ಲುಕ್ನಲ್ಲಿ ಎಂಟ್ರಿ ಕೊಟ್ಟ ಕಿಚ್ಚನ ಧ್ವನಿಯಲ್ಲಿತ್ತು ಖಡಕ್ ವಾರ್ನಿಂಗ್. ಈ ಜರ್ನಿಯಲ್ಲಿ ಈಗೊಂದು ಎಮರ್ಜೆನ್ಸಿ ಬಂದಿದೆ. ಈ ವಾರ ಈ ಮನೇಲಿ ಯಾರೂ ಉಳಿಯೋದು ಗ್ಯಾರಂಟಿ ಇಲ್ಲ ಎಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಸ್ಪರ್ಧಿಗಳೇ ಒಬ್ಬರನ್ನೊಬ್ಬರು ನಾಮಿನೇಟ್ ಮಾಡುತ್ತಿದ್ದರು. ಆದರೆ ಈ ಬಾರಿ ಪ್ರತಿಯೊಬ್ಬ ಕಂಟೆಸ್ಟೆಂಟ್ನ್ನೂ ನಾವೇ ಖುದ್ದಾಗಿ ನಾಮಿನೇಟ್ ಮಾಡ್ತಾ ಇದ್ದೀವಿ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು, ಯಾರು ಬೇಕಾದರೂ ಮನೆಯಿಂದ ಹೊರಬೀಳಬಹುದು ಎಂಬ “ಎಮರ್ಜೆನ್ಸಿ ಎಕ್ಸಿಟ್” ಬಾಂಬ್ ಸಿಡಿಸಿದ್ದಾರೆ ಸುದೀಪ್. ಈ ಸ್ಫೋಟದಿಂದಾಗಿ ಸ್ಪರ್ಧಿಗಳ ಮುಖದಲ್ಲಿ ನಗು ಮಾಯವಾಗಿ ಆತಂಕ ಮನೆಮಾಡಿದೆ.
ಸೈಲೆಂಟ್ ಆಗಿ ಶುರುವಾದ ಆಟವೀಗ ವೈಲೆಂಟ್ ಆಗಿ ತಿರುವು ಪಡೆದುಕೊಂಡಿದ್ದು, ಯಾವ ವಿಕೆಟ್ ಯಾವಾಗ ಉರುಳುತ್ತೋ ಕಾದುನೋಡಬೇಕಿದೆ.ಇದನ್ನೂ ಓದಿ:ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ

