– ಸೀಕ್ರೆಟ್ ರೂಮ್ಗೆ ಹೋಗ್ತಾರಾ?
ಬಿಗ್ ಬಾಸ್ ಕನ್ನಡದ (Bigg Boss Kannada0 ವಾರಾಂತ್ಯದ ಪಂಚಾಯಿತಿಯಲ್ಲಿ ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಬಿಗ್ ಬಾಸ್ ಮತ್ತೊಂದು ಅನಿರೀಕ್ಷಿತ ಶಾಕ್ ನೀಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕನ್ನಡಿ ಪ್ರತಿಬಿಂಬದ ಟಾಸ್ಕ್ ಮೂಲಕ ಮನೆಮಂದಿಯ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ಉಲ್ಟಾ ಮಾಡಲಾಗಿದೆ.
ಎಲಿಮಿನೇಷನ್ ಪ್ರಕ್ರಿಯೆಯ ಅಂಗವಾಗಿ ನಡೆದ ಕನ್ನಡಿ ಪರೀಕ್ಷೆಯಲ್ಲಿ ಅವಿನಾಶ್(Avinash) ಹಾಗೂ ವೈಷ್ಣವಿ(Vaishnavi)ಅವರ ಗಾಜು ಒಡೆಯದೇ ಮತ್ತೆ ಮನೆ ಪ್ರವೇಶಿಸಿದ್ದಾರೆ. ಆದರೆ, ವೀಕ್ಷಕರ ಗಮನ ಸೆಳೆದ ಮಾಡರ್ನ್ ಮಹಾಕವಿ ಮಂಜು(Manju) ಹಾಗೂ ಕಿರಣ್ ಶಾಸ್ತ್ರಿ(Kiran Shastri) ಅವರ ಕನ್ನಡಿ ಗಾಜು ಒಡೆದು ಪುಡಿಯಾಗುತ್ತಿದ್ದಂತೆ ಮನೆಯಲ್ಲಿದ್ದವರು ಶಾಕ್ಗೆ ಒಳಗಾಗಿದ್ದಾರೆ.
ಎಲ್ಲರೂ ಶಾಕ್ಗೆ ಒಳಗಾಗುತ್ತಿದ್ದಂತೆ ಕ್ಷಣಾರ್ಧದಲ್ಲೇ ತೆರೆ ಮೇಲೆ ಬಂದ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಹಾಗೂ ಪ್ರೇಕ್ಷಕರಿಗೆ ದೊಡ್ಡ ಸರ್ಪ್ರೈಸ್ ನೀಡಿದರು. ಈ ವಾರ ಬಿಗ್ ಬಾಸ್ ಮನೆಯಿಂದ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎಂದು ಘೋಷಿಸುವ ಮೂಲಕ ಶಾಕ್ ಜೊತೆಗೆ ಎಲ್ಲರನ್ನೂ ಸೇಫ್ ಮಾಡಿದರು. ಇದನ್ನೂ ಓದಿ: ದೊಡ್ಮನೆ ಮಂದಿಗೆ ಶಾಕ್ – ಕರುನಾಡಿನ ಜನತೆ, ಬಿಗ್ ಬಾಸ್ ವೀಕ್ಷಕರಿಗೆ ಕಿಚ್ಚನ ಚಪ್ಪಾಳೆ

ಇದೇ ವೇಳೆ ಮನೆಯಲ್ಲಿ ನಡೆದಿರುವ ಕೆಲ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುದೀಪ್, ಸ್ಪರ್ಧಿಗಳಿಗೆ ನೇರವಾಗಿಯೇ ಕಿವಿಮಾತು ಹೇಳಿದರು. ಸ್ಪರ್ಧಿಗಳು ತಮ್ಮ ಮನಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕಿತ್ತು. ಮನೆಯಲ್ಲಿ ನಡೆದ ಕೆಲ ವಿಚಾರಗಳು ನನಗೆ ತೀವ್ರ ಬೇಸರ ತರಿಸಿವೆ. ನಿಮ್ಮ ಮೇಲಿನ ಪ್ರೀತಿಯಿಂದಲೇ ಹೇಳುತ್ತಿದ್ದೇನೆ; ತಿದ್ದಿ ಬುದ್ಧಿ ಹೇಳುವುದು ನಮ್ಮ ಕೆಲಸ, ಅದನ್ನು ಅರಿತು ತಿದ್ದಿಕೊಳ್ಳುವುದು ನಿಮ್ಮ ಕೆಲಸ ಎಂದು ಹೇಳಿದರು.
ಈ ವಾರ ಎಲಿಮಿನೇಷನ್ ಇಲ್ಲದ ಕಾರಣ ಮಂಜ ಮತ್ತು ಕಿರಣ್ ಶಾಸ್ತ್ರಿ ಸೀಕ್ರೇಟ್ ರೂಮ್ ಪ್ರವೇಶಿಸುತ್ತಾರಾ? ಎಲ್ಲಿ ಇರುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಕಳೆದ ಬಾರಿ ಮನೆಯಲ್ಲಿ ಭಾರೀ ಜಗಳ ಮಾಡಿದ್ದಕ್ಕೆ ಧ್ರುವಂತ್ ಮತ್ತು ರಕ್ಷಿತಾ ಅವರನ್ನು ಸೀಕ್ರೆಟ್ ರೂಮ್ನಲ್ಲಿ ಹಾಕಿದ್ದರು. ಅದೇ ರೀತಿ ಮಂಜ ಮತ್ತು ಕಿರಣ್ ಶಾಸ್ತ್ರಿ ಅವರನ್ನು ಹಾಕಿರಬಹುದು ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.

