ಮೈಸಾ ಚಿತ್ರದ ಹಾಡಿನ ಚಿತ್ರೀಕರಣ ವೇಳೆ ರಶ್ಮಿಕಾ (Rashmika Mandanna) ಬಿದ್ದ ಪರಿಣಾಮ ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ, ಸಣ್ಣ ಸರ್ಜರಿಗೆ ಒಳಗಾದ ರಶ್ಮಿಕಾಗೆ ವೈದ್ಯರು 6 ತಿಂಗಳು ಸಂಪೂರ್ಣ ವಿಶ್ರಾಂತಿಗೆ ಸೂಚಿಸಿದ್ದರು. ರಶ್ಮಿಕಾ ಇದೀಗ ವಿಶ್ರಾಂತಿಯಲ್ಲಿದ್ದಾರೆ. ಅಂದಹಾಗೆ ರಶ್ಮಿಕಾ ಹೀಗೆ ಮನೆಯಲ್ಲೇ ಲಾಕ್ ಆಗಿದ್ದು, ಅದರ ಎಫೆಕ್ಟ್ ಅವರ ಮುಂಬರುವ ಚಿತ್ರ `ರಣಬಾಲಿ’ (Ranabali) ಮೇಲೆಯೂ ಆಗಿದೆ ಎನ್ನಲಾಗ್ತಿದೆ.
ಮದುವೆಯ ಬಳಿಕ ವಿಜಯ್ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿರುವ ಚಿತ್ರವೇ `ರಣಬಾಲಿ’. ಇದೇ ವರ್ಷ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ರಶ್ಮಿಕಾ ಗಾಯಗೊಂಡಿರುವ ಕಾರಣ, ಚಿತ್ರದ ಬಿಡುಗಡೆಯನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಇದನ್ನೂ ಓದಿ: ದೇಹವನ್ನು ಮಷಿನ್‌ನಂತೆ ನೋಡದೇ ಮನುಷ್ಯನ ಶರೀರದಂತೆ ನೋಡೋದನ್ನ ಕಲಿಯಬೇಕು – ಆರೋಗ್ಯದ ಅಪ್ಡೇಟ್ ಕೊಟ್ಟ ರಶ್ಮಿಕಾ
`ರಣಬಾಲಿ’ ಶೂಟಿಂಗ್ ಮುಗಿದಿದ್ದರೂ ಕೆಲವು ಪ್ಯಾಚ್‌ವರ್ಕ್ ಹಾಗೂ ಡಬ್ಬಿಂಗ್‌ಗಳು ಆಗಬೇಕಿದೆ. ಆದರೆ, ರಶ್ಮಿಕಾ ರೆಸ್ಟ್‌ನಲ್ಲಿರುವ ಕಾರಣ ಕೆಲಸಗಳು ಹಾಗೆಯೇ ನಿಂತಿವೆ. ಇದರಿಂದಾಗಿ ಸೆಪ್ಟೆಂಬರ್‌ಗೆ ರಿಲೀಸ್ ಆಗಬೇಕಿದ್ದ `ರಣಬಾಲಿ’ ಅ.30 ಕ್ಕೆ ಹೊಸ ಬಿಡುಗಡೆ ದಿನಾಂಕವನ್ನ ಘೋಷಿಸುವ ಸಾಧ್ಯತೆ ಇದೆ.
ರಣಬಾಲಿ ಚಿತ್ರದ ಮೇಲೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಸಾಲು ಸಾಲು ಚಿತ್ರಗಳಲ್ಲಿ ಸೋಲುಂಡ ವಿಜಯ್ ಈ ಚಿತ್ರ ವಿಜಯ ಪತಾಕೆಯ ರುಚಿ ಕೊಡುವ ನಿರೀಕ್ಷೆಯಲ್ಲಿದ್ದಾರೆ. ರಶ್ಮಿಕಾಗೂ ಮದುವೆ ಬಳಿಕ ತೆರೆಕಂಡ ಕಾಕ್‌ಟೈಲ್ 2 ಚಿತ್ರ ನಿರೀಕ್ಷಿಸಿದ್ದಷ್ಟು ಸದ್ದು ಮಾಡಲಿಲ್ಲ. ಹೀಗಾಗಿ ರಣಬಾಲಿ ರಶ್ಮಿಕಾ ವಿಜಯ್ ಪಾಲಿಗೆ ಬಲು ನಿರೀಕ್ಷಿತ ಸಿನಿಮಾ. ಇದೀಗ ರಶ್ಮಿಕಾಗಾಗಿ ಸಿನಿಮಾ ಬಿಡುಗಡೆ ಮುಂದೂಡಿಕೆ ಆಗಿದೆ. ಇದನ್ನೂ ಓದಿ: ಐವರು ಸಂಗೀತ ನಿರ್ದೇಶಕರಿಂದ ಮಿಸ್ಟರ್ ಕಲ್ಯಾಣ್ ಕುಮಾರ್ ಟೈಟಲ್ ರಿಲೀಸ್

