ಇನ್‌ಸ್ಟಾದಲ್ಲಿ ಸುದೀರ್ಘ ಬರಹದ ಪೋಸ್ಟ್ ಹಂಚಿಕೊಂಡ ರಶ್ಮಿಕಾ ಸದ್ಯಕ್ಕೆ ಆರೋಗ್ಯದ ಸ್ಥಿತಿಗತಿ ಬಗ್ಗೆ ಆಗಿ ಹಂಚಿಕೊಂಡಿದ್ದಾರೆ. ರಶ್ಮಿಕಾ ಈ ಹಿಂದೆಯೂ ಅನೇಕ ಬಾರಿ ಹೀಗೆ ಗಾಯಗೊಂಡಿದ್ದರು. ಹೀಗೆ ಸತತವಾಗಿ ಗಾಯಗೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಚೇತರಿಕೆ ಹಂತದ ಫೋಟೋ ಹಂಚಿಕೊಂಡಿರುವ ರಶ್ಮಿಕಾ, ಫಾಲೋವರ್ಸ್ ಜೊತೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಾಖಲೆ ಬರೆದ ʻರಾಮಾಯಣʼ ಟ್ರೈಲರ್ – ರಾಕಿಂಗ್ ಸ್ಟಾರ್ ಹವಾ ಜೋರು
View this post on Instagram
ರಶ್ಮಿಕಾ ಹೇಳಿದ್ದೇನು ?
ʻಗಾಯಗಳಾಗುವುದು ನಿಜಕ್ಕೂ ಕಿರಿಕಿರಿ ಉಂಟುಮಾಡುತ್ತದೆ. ಈ ವಿಷಯ ಯಾರಿಗೂ ತಿಳಿಯಬಾರದು ಎಂದುಕೊಂಡಿದ್ದೆ. ಸತತವಾಗಿ ನನಗೆ ಆಗುತ್ತಿರುವ ಮೂರನೇ ಗಾಯವಿದು. ನನ್ನ ದೇಹವನ್ನು ಯಂತ್ರದಂತೆ ನೋಡದೆ, ಮನುಷ್ಯನ ದೇಹದಂತೆ ನೋಡಿಕೊಳ್ಳುವುದನ್ನು ನಾನು ಕಲಿಯಬೇಕು. ನಮ್ಮ ಸೊಂಟವನ್ನು ಕಾಲಿಗೆ ಜೋಡಿಸುವ ನಾಲ್ಕು ಸ್ನಾಯುಗಳಲ್ಲಿ ಒಂದಾದ ಬಲ ಸೊಂಟದ ಸ್ನಾಯು ಬೇರ್ಪಟ್ಟಿದೆ. ನಾನು ಕಾಲು ಎತ್ತಬೇಕೆಂದರೆ ಅದು ಮತ್ತೆ ಸರಿಯಾಗಿ ಜೋಡಣೆಯಾಗಬೇಕಿದೆ. ಮೈಸಾ ಸಿನಿಮಾದ ಡ್ಯಾನ್ಸ್ ಶೂಟಿಂಗ್ ವೇಳೆ ಈ ಘಟನೆ ನಡೆಯಿತು. ನಿಜಕ್ಕೂ ನಾನು ಮಾಡುತ್ತಿರುವ ಅತ್ಯಂತ ಸವಾಲಿನ ಸಿನಿಮಾ ಎಂದರೆ ಅದು ಮೈಸಾ.
ಮೈಸಾದಲ್ಲಿ ರಶ್ಮಿಕಾ ಬುಡಕಟ್ಟು ಜನಾಂಗದ ವಾರಿಯರ್ ಪಾತ್ರದಲ್ಲಿ ಕಾಣಿಸ್ಕೊಂಡಿದ್ದು, ಹಲವು ರೀತಿಯಲ್ಲಿ ಸಾಹಸ ಮಾಡಿದ್ದಾಗಿ ಹೇಳಿಕೊಂಡಿದ್ದರು. ಇದೀಗ ಹಾಡಿನ ಚಿತ್ರೀಕರಣದಲ್ಲಿ ಸೊಂಟದ ಸ್ನಾಯು ಮುರಿದಿದೆ ಅನ್ನೋ ಮಾಹಿತಿ ಹಂಚಿಕೊಂಡಿದ್ದಾರೆ. ಹೀಗಾಗಿ ದೇಹವನ್ನ ಯಂತ್ರದ ರೀತಿ ನೋಡೋದನ್ನ ನಾನು ಬಿಡಬೇಕು’ ಎಂದು ಹೇಳುತ್ತಾ ತಮಗೆ ತಾವೇ ಹೇಳಿಕೊಂಡಿದ್ದಾರೆ ರಶ್ಮಿಕಾ. ಇದನ್ನೂ ಓದಿ: ಸೆ.6ರಿಂದ ಹಿಂದಿ ಬಿಗ್ ಬಾಸ್ ಶುರು – ಮೊದಲ ಪ್ರೋಮೋ ಔಟ್
