ತಮಿಳುನಾಡಿನ (Tamil Nadu) ಸಿಎಂ ಆಗಿ ನಟ ದಳಪತಿ ವಿಜಯ್ (Vijay) ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ಸಿಎಂ ಆದ ನಂತರ ಇದೇ ಜೂನ್ 22ಕ್ಕೆ ದಳಪತಿ ವಿಜಯ್ ಅವರು ಮೊದಲ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಲದ ಹುಟ್ಟುಹಬ್ಬ (Birth Day) ಸಹಜವಾಗಿಯೇ ಜೋರಾಗಿ ಇರಲಿದೆ. ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯನ್ನೇ ನೀಡಲಾಗುತ್ತಿದೆ.
ಅಂದುಕೊಂಡಂತೆ ನಡೆದರೆ ವಿಜಯ್ ಅವರ ನಟನೆಯ ಕೊನೆಯ ಸಿನಿಮಾ ಜನನಾಯಗನ್ (Jana Nayagan) ಬಿಡುಗಡೆ ಆಗುತ್ತದೆ. ಇನ್ನೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲವಾದ್ದರಿಂದ, ಈ ಚಿತ್ರ ಬಿಡುಗಡೆ ಆಗುವುದು ಅನುಮಾನ ಎನ್ನಲಾಗುತ್ತಿದೆ. ಅದರ ಬದಲು ಮತ್ತೆರಡು ಸಿನಿಮಾಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಇದನ್ನೂ ಓದಿ: ಮೂಕಾಂಬಿಕೆ ಸನ್ನಿಧಿಗೆ ಸಿಎಂ ವಿಜಯ್ : ಎಂಜಿಆರ್, ಜಯಲಲಿತಾ ಕೊಲ್ಲೂರಿಗೆ ನೀಡಿದ್ದೇನು?
