ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿ ಮಂಜು ಅಂದ್ರೆ ಅಬ್ಬರದ ಆಟಕ್ಕೆ ಹೆಸರುವಾಸಿ. ಎದುರಿದ್ದ ಕಂಟೆಸ್ಟಂಟ್ ಎಷ್ಟೇ ಅಬ್ಬರಿಸಿದ್ರೂ ಮಂಜ ಸೋಲುವುದಿಲ್ಲ. ಹೀಗಾಗಿ ಆಂಗ್ರಿಯಂಗ್ ಮ್ಯಾನ್ ಎಂದೇ ಕರೆಸಿಕೊಳ್ಳುತ್ತಿದ್ದವರು ಮಾಡರ್ನ್ ಮಹಾಕವಿ ಮಂಜ. ಆದರೆ ಇದೀಗ ಮಂಜಗೆ ಲವ್ ಆಗಿದೆ ಎಂದು ಊಹಿಸಿದ್ದಾರೆ ಕಿಚ್ಚ ಸುದೀಪ್. ಪ್ರೀತಿಗೆ ಕಾರಣ ಗಾನವಿ ಎಂದೇ ಕೋ-ಕಂಟೆಸ್ಟಂಟ್ಗಳು ಊಹಿಸಿದ್ದಾರೆ. `ಫೈರ್’ನಂತಿದ್ದ ಮಹಾಕವಿ ಮಂಜ ಮನಸ್ಸನ್ನ `ಫ್ಲವರ್’ ಮಾಡಿದ ಕೀರ್ತಿ ಗಾನವಿಗೆ ಸೇರಿದೆ.
ಕಳೆದ ಎರಡು ವಾರದ ಹಿಂದೆ ಬಿಗ್ಬಾಸ್ಗೆ ರೀ ಎಂಟ್ರಿ ಕೊಟ್ಟು ಪ್ರವೇಶಿಸಿದ ಮಂಜು ಈಗ ಬದಲಾಗಿದ್ದಾರೆ. ಹಿಂದೆಲ್ಲಾ ಅಬ್ಬರಿಸುತ್ತಿದ್ದ ಮಂಜು ಈಗ ಕೊಂಚ ಆವೇಶ ತಗ್ಗಿಸಿಕೊಂಡಿದ್ದಾರೆ. ಇದಕ್ಕೆಲ್ಲಾ ಗಾನವಿ ಕಾರಣ ಎಂದು ಊಹಿಸಲಾಗ್ತಿದೆ. ಹೊಸ ಮಂಜು ಕುರಿತು ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಹುಡ್ಗೀರಂದ್ರೆ ಉರಿದು ಬೀಳುತ್ತಿದ್ದ ಮಂಜ, ಗಾನವಿಯ ನಗುವಿಗೆ ಮಾತ್ರ ಕರಗಿ ಹೋಗಿದ್ದಾರೆ. ಮಂಜನ ಈ ಬದಲಾವಣೆಯನ್ನು ಗಾನವಿ ನೋಟಿಸ್ ಮಾಡಿದ್ದಾರೆ. ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಜೊತೆಗಿನ ವೀಕೆಂಡ್ ಚರ್ಚೆಯಲ್ಲಿ ಮಂಜ ಹಾಗೂ ಗಾನವಿ ಅಕ್ಕಪಕ್ಕ ಕುಳಿತಿದ್ರು. ಮೊದಲೆಲ್ಲಾ ನಾನು ಮಾಡರ್ನ್ ಮಹಾಕವಿ ಮಂಜು ಎಂದು ಧ್ವನಿ ಏರಿಸಿ ಕೂಗುತ್ತಿದ್ದ ಮಂಜು ಧ್ವನಿ ಈಗ ರೊಮ್ಯಾಂಟಿಕ್ ಆಗಿ ಬದಲಾಗಿದೆ ಎಂದಿದ್ದಾರೆ ಕಿಚ್ಚ ಸುದೀಪ್. ಈ ವಿಚಾರನನ್ನು ಸುದೀಪ್ ಪ್ರಸ್ತಾಪ ಮಾಡುತ್ತಿದ್ದಂತೆ ಗಾನವಿಯಿಂದ ಮಂಜ ಬದಲಾಗಿದ್ದು ಹೌದು ಎಂದು ಇತರ ಸ್ಪರ್ಧಿಗಳು ದನಿಗೂಡಿಸಿದ್ದಾರೆ.
ಬೇರೆಲ್ಲಾ ಸ್ಪರ್ಧಿಗಳ ಮಾತಿಗೆ ಈಗಲೂ ವಿರೋಧಿಸುವ ಮಂಜ ಗಾನವಿಯ ಮಾತಿಗೆ ಮಾತ್ರ ಕರಗುತ್ತಾರೆ. ಗಾನವಿಯ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಹಾಗೆಯೇ ಕೋ-ಸ್ಪರ್ಧಿ ಗಾನವಿ ಜೊತೆಯೇ ಹೆಚ್ಚು ಸಮಯವನ್ನೂ ಕಳೆಯುತ್ತಾರೆ. ಆದರೆ, ಹಿಂದೆಲ್ಲಾ ಸೌಂದರ್ಯ, ಯಶಸ್ ವಿಚಾರವಾಗಿ ನಾನು ಪ್ರೀತಿ-ಪ್ರೇಮ ಮಾಡೋಕ್ ಬಂದಿಲ್ಲ ಎಂದು ಹೇಳುತ್ತಿದ್ದ ಮಂಜ ಇದೀಗ ರೀ ಎಂಟ್ರಿಯಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಬದಲಾದ್ರು ಅನ್ನೋದೇ ವಿಶೇಷ.
