ಬಿಸ್ಲೆರಿ ಇಂಟರ್ನ್ಯಾಷನಲ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿದ FSSAI
ನವದೆಹಲಿ: ಬಿಸ್ಲೆರಿ ವಾಟರ್ ಪ್ರಿಯರಿಗೆ ಶಾಕ್ ಎದುರಾಗಿದೆ. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಸುರಕ್ಷಿತ ಎಂದು ಕೇಂದ್ರ ಎಫ್ಎಸ್ಎಸ್ಎಐ ಘೋಷಿಸಿದೆ.
ಬಿಸ್ಲೆರಿ ನೀರಿನ ಬಗ್ಗೆ FSSAI ನೇರವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದೆ. ಬಿಸ್ಲೇರಿ ಇಂಟರ್ನ್ಯಾಷನಲ್ ಪ್ರೈ. ಲಿ. ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಲಾಗಿದೆ. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಸುರಕ್ಷಿತ ಅಂತ ವರದಿ ತಿಳಿಸಿದೆ.
ಬಿಸ್ಲೆರಿ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಸ್ಯಾಂಪಲ್ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಸ್ಯಾಂಪಲ್ನಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಿದೆ ಅಂತ ವರದಿಯಲ್ಲಿ ತಿಳಿದುಬಂದಿದೆ. FSS ಕಾಯ್ದೆ 2006ರ ಅಡಿ ಅಸುರಕ್ಷಿತ ಎಂದು ಘೋಷಿಸಲಾಗಿದೆ.
ಅಸುರಕ್ಷಿತ ಹಿನ್ನೆಲೆ ಆರೋಗ್ಯಕ್ಕೆ ಹಾನಿಕಾರಕ. ಈಗ FSS ಕಾಯ್ದೆ 2006 ರ ಅಡಿ ಬಿಸ್ಲೆರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ರೆಫರಲ್ ಫುಡ್ ಲ್ಯಾಬ್ನಲ್ಲೂ ಪರೀಕ್ಷೆ ಮಾಡಲಾಗಿದೆ. ಲ್ಯಾಬ್ ಪರೀಕ್ಷೆಯಲ್ಲಿ ನೀರಿನಲ್ಲಿ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್ ಪತ್ತೆಯಾಗಿದೆ.
ಎರಡನೇ ಲ್ಯಾಬ್ ಪರೀಕ್ಷೆಯಲ್ಲೂ ಅನ್ಸೇಫ್ ಎಂದು ವರದಿ ಬಂದಿದೆ. ಆಹಾರ ಸುರಕ್ಷತಾ ಕಾಯ್ದೆ ಉಲ್ಲಂಘನೆಯಾಗಿರುವುದು ದೃಢಪಟ್ಟಿದೆ. ಬಿಸ್ಲೆರಿ ಇಂಟರ್ನ್ಯಾಷನಲ್ ವಿರುದ್ಧ ಕಾನೂನು ಕ್ರಮಕ್ಕೆ FSSAI ಅನುಮತಿ ನೀಡಿದೆ.
