– ಸಿಎಂ, ಆರೋಗ್ಯ ಸಚಿವರ ಸಂಧಾನ ವಿಫಲ
ಬೆಂಗಳೂರು: ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಆರನೇ ದಿನವೂ ಮುಂದುವರಿಯಿತು. ಚಳಿಯನ್ನೂ ಲೆಕ್ಕಿಸದೆ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವರು ನಡೆಸಿದ ಸಭೆಗಳೆಲ್ಲ ವಿಫಲವಾಗಿದ್ದು, ಮುಂದಿನ ಅಧಿವೇಶನದಲ್ಲಿ ನಿರ್ಣಯ ಮಾಡ್ತೀವಿ. ಪ್ರತಿಭಟನೆ ಕೈಬಿಡುವಂತೆ ಸಿಎಂ ಮನವಿ ಮಾಡಿದ್ರು. ಡಿಕೆಶಿ ಮನವಿಗೂ ಬಗ್ಗದೇ ಪ್ರತಿಭಟನೆ ಮುಂದುವರಿಸಿದ್ದಾರೆ. ಸಿಎಂ ಡಿಕೆಶಿ 4 ದಿನ ಜಪಾನ್ ಪ್ರವಾಸಕ್ಕೆ ತೆರಳಿದ್ದಾರೆ. ಅಧಿವೇಶನದವರೆಗೂ ಪ್ರತಿಭಟನೆ ಕೈ ಬಿಡಿ ಅಂತ ಯು.ಟಿ.ಖಾದರ್ ಮನವಿ ಮಾಡಿದ್ದಾರೆ.
ಇಷ್ಟು ದಿನ ನಾವು ಮಾತ್ರ ಹೋರಾಟ ಮಾಡಿದ್ದೇವೆ. ಇನ್ಮುಂದೆ ನಮ್ಮ ಕುಟುಂಬದವರೂ ಬೀದಿಗಿಳಿಯುತ್ತಾರೆ. ಅಷ್ಟೇ ಅಲ್ಲ, ಗ್ರಾಮದ ಜನರನ್ನೂ ಪ್ರತಿಭಟನೆಗೆ ಕರೆತರುತ್ತೇವೆ ಅಂತ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ 350 ಕೋಟಿ ಕೋಡೋಕೆ ನಿಮಗೆ ಆಗ್ತಿಲ್ಲ. ಸಿಎಂ ಮನೆ ಶೃಂಗಾರಕ್ಕೆ 100 ಕೋಟಿ ಖರ್ಚು ಮಾಡಿದ್ದಾರೆ ಅಂತ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಮಧ್ಯೆ, ಹೊಸಕೋಟೆ ಮೂಲದ ಪವಿತ್ರಾ ಎಂಬ ಆಶಾ ಕಾರ್ಯಕರ್ತೆ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸಿನಿಮಾ ನಟ, ನಟಿಯರು, ಗಣ್ಯರು, ಸಾಹಿತಿಗಳು, ನ್ಯಾಯಾವಾದಿಗಳು ಬೆಂಬಲ ಕೊಟ್ಟಿದ್ದಾರೆ.
