ಕಳೆದ ಎರಡು ವಾರಗಳ ಹಿಂದೆ ಬಿಗ್ಬಾಸ್ಗೆ ರೀ ಎಂಟ್ರಿ ಕೊಟ್ಟಿದ್ದ ಸ್ಪರ್ಧಿ ಮಾಡರ್ನ್ ಮಹಾಕವಿ ಮಂಜ ಈ ವಾರ ಬಿಗ್ಬಾಸ್ನಿಂದ ಎಲಿಮನೇಟ್ ಆಗಿದ್ದಾರೆ. ಬಿಗ್ಬಾಸ್ ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ. ರೀ ಎಂಟ್ರಿ ಕೊಟ್ಟು ಅಬ್ಬರಿಸುವ ಸೂಚನೆ ಕೊಟ್ಟಿದ್ದ ಮಂಜ ಇದೀಗ ಎರಡೇ ವಾರಕ್ಕೆ ವಾಪಸ್ ಬಂದಿರುವುದು ಬಿಗ್ ಪ್ರಿಯರಿಗೆ ಶಾಕ್ ಆಗಿದೆ. ಆದರೆ ಅದರ ಹಿಂದೆ ನಿಗೂಢ ಕಾರಣವೂ ಇದೆ.
ಬಿಗ್ಬಾಸ್ ಮೂಲ ನಿಯಮ ಉಲ್ಲಂಘಿಸಿದ್ದ ಕಾರಣಕ್ಕೆ ಕಂಟೆಸ್ಟೆಂಟ್ ಮಂಜನನ್ನ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಕಳುಹಿಸಿದ್ದರು. ಅದಾದ ಬಳಿಕ ಒಂದು ತಿಂಗಳಾದ್ಮೇಲೆ ಮತ್ತೆ ಮಂಜ ವಾಪಸ್ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಮಂಜ ಕಂಟೆಸ್ಟೆಂಟಾ..? ಅಥವಾ ಗೆಸ್ಟಾ ಅನ್ನೋದಾಗಿ ಘೋಷಣೆ ಆಗಿರಲಿಲ್ಲ. ಇದೀಗ ಮಂಜು ಕಂಟೆಸ್ಟೆಂಟ್ ಅಲ್ಲ, ಅತಿಥಿ ಅನ್ನೋದು ತಿಳಿದುಬಂದಿದೆ. ಹೀಗಾಗಿ ಈ ವಾರ ಮಂಜ ಶೋನಿಂದ ಹೊರಕ್ಕೆ ಹೋಗಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಈ ವಾರ ಮಂಜ ಎಲಿಮಿನೇಟ್ ಆಗಿರಲಿಲ್ಲ. ಹೀಗಾಗಿ, ಯಾರೂ ಮಂಜ ನಿರ್ಗಮನವನ್ನು ನಿರೀಕ್ಷಿಸಿರಲಿಲ್ಲ. ಆದರೆ, ಮಂಜಗೆ ಕೇವಲ ಎರಡು ವಾರ ಕಾಲ ತಮ್ಮ ತಪ್ಪು ತಿದ್ದಿಕೊಳ್ಳಲು, ಅಸಲಿ ಟ್ಯಾಲೆಂಟ್ ತೋರಿಸಲು ಹಾಗೂ ಜೀವನಪರ್ಯಂತ ಬಿಗ್ಬಾಸ್ನಿಂದ ಹೊರಕ್ಕೆ ಹಾಕಿರೋ ಸ್ಪರ್ಧಿ ಎಂಬ ಹಣಪಟ್ಟಿಯಿಂದ ದೂರ ಮಾಡಲು ಬಿಗ್ಬಾಸ್ ಅವಕಾಶ ಕೊಟ್ಟಿದ್ದರು. ಹೀಗಾಗಿ, ಇದೀಗ ರೀ ಎಂಟ್ರಿಯ ಸಮಯ ಮುಗಿಯುತ್ತಿದ್ದಂತೆ ಮಂಜ ಬಿಗ್ಬಾಸ್ ಕಾರ್ಯಕ್ರಮ ಬಿಟ್ಟು ಹೊರ ಬಂದಿದ್ದಾರೆ.
ಅಗ್ನಿಪರೀಕ್ಷೆಯಿಂದ ಬಿಗ್ಬಾಸ್ ಸ್ಪರ್ಧೆಗೆ ಅವಕಾಶ ಪಡೆದಿದ್ದ ಮಂಜ ಉಳಿದ ಕಂಟೆಸ್ಟೆಂಟ್ ಪಾಲಿನ ಟಫ್ ಕಾಂಪಿಟೇಟರ್ ಎಂದೇ ಪರಿಗಣಿಸಲ್ಪಟ್ಟಿದ್ದರು. ಆದರೆ, ನಾಲಿಗೆಗೆ ಲಗಾಮು ಹಾಕದೆ ಮನೆಯಿಂದ ಕಿಕ್ಔಟ್ ಆಗಿದ್ದರು. ಆದರೂ ಬಿಗ್ಬಾಸ್ ಮತ್ತೊಂದು ಅವಕಾಶವನ್ನು ಮನೆಗೆ ಪ್ರವೇಶಿಸಲು ನೀಡಿದ್ದರು. ಇದೀಗ ಕ್ಲೀನ್ಚಿಟ್ ಪಡೆದುಕೊಂಡು ಮನೆಯಿಂದ ವಾಪಸ್ಸಾಗಿರುವ ಖುಷಿಯಲ್ಲಿದ್ದಾರೆ ಮಾಡರ್ನ್ ಮಹಾಕವಿ ಮಂಜ.
