ಮುಂಬೈ: 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ( ODI World Cup 2027) ಟೂರ್ನಿಗೆ ಈಗಾಗಲೇ ಎಲ್ಲಾ ತಂಡಗಳು ತಮ್ಮ ತಯಾರಿ ಶುರು ಮಾಡಿವೆ. ಅದರ ಭಾಗವಾಗಿ ಕಳೆದ ಬಾರಿಯ ರನ್ನರ್ ಅಪ್ ಟೀಂ ಇಂಡಿಯಾ (Team India) ಕೂಡ ವಿವಿಧ ತಂಡಗಳ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಈ ಮಧ್ಯೆಯೇ ಮುಂದಿನ ವರ್ಷ ಏಕದಿನ ವಿಶ್ವಕಪ್ ಎಲ್ಲಿ? ಯಾವಾಗ ನಡೆಯುತ್ತದೆ ಅನ್ನೋ ಮಾಹಿತಿ ಬಹಿರಂಗಗೊಂಡಿದೆ.
ಮುಂಬರುವ ಏಕದಿನ ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ (South Africa), ಜಿಂಬಾಬ್ವೆ (Zimbabwe ) ಮತ್ತು ನಮೀಬಿಯಾ (Namibia) ಜಂಟಿಯಾಗಿ ಆತಿಥ್ಯವಹಿಸುತ್ತಿವೆ ಎಂಬ ಸುದ್ದಿ ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಈ ಮೆಗಾ ಟೂರ್ನಿ ಯಾವಾಗ ಆರಂಭವಾಗಿ ಎಲ್ಲಿಯವರೆಗೆ ನಡೆಯಲಿದೆ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಫಿಟ್ನೆಸ್ ಪರೀಕ್ಷೆಯಲ್ಲಿ ರೋಹಿತ್, ಪಾಂಡ್ಯ ಪಾಸ್; ಅಫ್ಘಾನ್ ವಿರುದ್ಧ ಏಕದಿನ ಸರಣಿಯಲ್ಲಿ ಆಡ್ತಾರಾ?

ಯಾವಾಗಿನಿಂದ ವಿಶ್ವಕಪ್ ಟೂರ್ನಿ?
ವರದಿಗಳ ಪ್ರಕಾರ, 2027 ರ ಅಕ್ಟೋಬರ್ 4 ರಿಂದ ನವೆಂಬರ್ 21 ರ ಟೂರ್ನಿ ನಡೆಯುವ ಸಾಧ್ಯತೆಯಿದೆ. ಈ ಟೂರ್ನಿಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿವೆ.
ಒಟ್ಟು 54 ಪಂದ್ಯಗಳಲ್ಲಿ ಆಫ್ರಿಕಾ 41 ಪಂದ್ಯ, ಜಿಂಬಾಬ್ವೆ 8 ರಿಂದ 10 ಪಂದ್ಯ ಹಾಗೂ ನಮೀಬಿಯಾ 3 ಪಂದ್ಯಗಳಿಗೆ ಆತಿಥ್ಯ ವಹಿಸುವ ಸಾಧ್ಯತೆಗಳಿವೆ. ದಕ್ಷಿಣ ಆಫ್ರಿಕಾದ 8 ಕ್ರೀಡಾಂಗಣಗಳು (ಬ್ಲೋಮ್‌ಫಾಂಟೈನ್, ಕೇಪ್ ಟೌನ್, ಸೆಂಚುರಿಯನ್, ಡರ್ಬನ್, ಪೂರ್ವ ಲಂಡನ್, ಗ್ಕೆಬೆರ್ಹಾ, ಜೋಹಾನ್ಸ್‌ಬರ್ಗ್ ಮತ್ತು ಪಾರ್ಲ್ ಕ್ರೀಡಾಂಗಣಗಳು) ಹೆಚ್ಚಿನ ಪಂದ್ಯಗಳನ್ನ ಆಯೋಜಿಸುವ ನಿರೀಕ್ಷೆಯಿದೆ.
ಮೇ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ವಿಶ್ವಕಪ್ ವೇಳಾಪಟ್ಟಿಯ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ. ಆದ್ರೆ ಅಂತಿಮ ನಿರ್ಧಾರವು ಜುಲೈನಲ್ಲಿ ಎಡಿನ್‌ಬರ್ಗ್‌ನಲ್ಲಿ ನಡೆಯುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸ್ಟೈಕ್‌ನತ್ತ ಓಡಿದ ಇಬ್ಬರು ಬ್ಯಾಟರ್‌ಗಳು – ಪ್ರಿಯಾಂಶ್ ಆರ್ಯ ವಿಚಿತ್ರ ರನೌಟ್!

14 ತಂಡಗಳು, 2 ಗುಂಪುಗಳಲ್ಲಿ ಪ್ರಶಸ್ತಿಗಾಗಿ ಕಾದಾಟ
ಕಳೆದ ಬಾರಿ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ 14 ತಂಡಗಳು ಭಾಗಿಯಾಗುತ್ತಿವೆ. ತಲಾ 7 ತಂಡಗಳನ್ನ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಹಂತದಲ್ಲಿ ಅಗ್ರ 3 ಸ್ಥಾನ ಪಡೆದ ತಂಡಗಳು ಸೂಪರ್ – 6 ಹಂತಕ್ಕೆ ಆಯ್ಕೆ ಆಗಲಿವೆ. ಸೂಪರ್ ಸಿಕ್ಸ್‌ನಲ್ಲಿ ಅಗ್ರ 4 ತಂಡಗಳ ನಡುವೆ ಸೆಮಿಫೈನಲ್ ನಡೆಯಲಿದೆ. ಸೆಮಿಸ್ 1, 2 ನಲ್ಲಿ ಗೆದ್ದ ತಂಡಗಳು ಫೈನಲ್ ಪ್ರವೇಶಿಸಲಿವೆ.
2003 ರ ನಂತರ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಜಂಟಿಯಾಗಿ ವಿಶ್ವಕಪ್ ಅನ್ನು ಆಯೋಜಿಸುತ್ತಿರುವುದು ಇದು 2ನೇ ಬಾರಿಯಾಗಿದೆ. ನಮೀಬಿಯಾ ಮೊದಲ ಬಾರಿಗೆ ಆತಿಥ್ಯ ವಹಿಸುತ್ತಿದೆ. ಇದನ್ನೂ ಓದಿ: ಇಂದಿನಿಂದ 23ನೇ ಆವೃತ್ತಿಯ FIFA ವಿಶ್ವಕಪ್ ಮಹಾಸಮರ ಆರಂಭ
