ಡಾಂಬುಲ: ಶ್ರೀಲಂಕಾ(Sri Lanka) ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಎ (India A) ತಂಡದ ಬ್ಯಾಟರ್ ಪ್ರಿಯಾಂಶ್ ಆರ್ಯ(Priyansh Arya) ಕೆಟ್ಟ ರೀತಿಯಲ್ಲಿ ರನೌಟ್ ಆಗಿದ್ದಾರೆ.
ತಂಡದ ಮೊತ್ತ 68 ಆಗಿದ್ದಾಗ ಸ್ಟ್ರೈಕ್‌ನಲ್ಲಿದ್ದ ರುತುರಾಜ್ ಗಾಯಕ್ವಾಡ್(Ruturaj Gaikwad) ಇದ್ದರು. ಫೆರ್ನಾಂಡೋ ಎಸೆದ 13ನೇ ಓವರಿನ ಕೊನೆಯ ಎಸೆತವನ್ನು ಗಾಯಕ್ವಾಡ್ ಔಟ್‌ಸೈಡ್ ಆಫ್ ಕಡೆ ಬಾರಿಸಿದರು. ಒಂದು ರನ್ ಓಡಿದ ಬಳಿಕ ಸ್ಟ್ರೈಕ್‌ಗೆ ಬಂದ ಪ್ರಿಯಾಂಶ್ ಆರ್ಯ ಮತ್ತೊಂದು ರನ್ ಓಡುವ ಕರೆ ನೀಡಿದರು.
ಪ್ರಿಯಾಂಶ್ ಕಾಲ್ ಕೊಟ್ಟ ಬೆನ್ನಲ್ಲೇ ಗಾಯಕ್ವಾಡ್ ಸ್ಟ್ರೈಕ್‌ನತ್ತ ಓಡಿದರು. ಆದರೆ ಪ್ರಿಯಾಂಶ್ ಆರ್ಯ ನಾನ್ ಸ್ಟ್ರೈಕ್‌ನತ್ತ ಓಡಿ ನಂತರ ನಿರ್ಧಾರ ಬದಲಾಯಿಸಿ ಸ್ಟ್ರೈಕ್ ಕಡೆ ತಿರುಗಿ ಬ್ಯಾಟ್ ಇಟ್ಟಿದ್ದಾರೆ. ಈ ಸಮಯದಲ್ಲೇ ಗಾಯಕ್ವಾಡ್ ಸ್ಟ್ರೈಕ್‌ಗೆ ಆಗಮಿಸಿದ್ದರು. ಇದನ್ನೂ ಓದಿ: ಅವಧೂತ ಶ್ರೀ ಅರ್ಜುನ ಗುರೂಜಿ ಭೇಟಿಯಾದ U19 ಕ್ರಿಕೆಟ್ ತಂಡದ ನಾಯಕ ಆಯುಷ್ ಮ್ಹಾತ್ರೆ
Priyansh Arya gave a call to Ruturaj for 2nd run then backed off but karma hit instantly, keeper blocked his bat and Arya got out 😭😭#INDAvsSLA pic.twitter.com/pNNicubc9K
— سهيل (@tweetsbysohaill) June 9, 2026
ವಿಕೆಟ್ ಕೀಪರ್ ತನ್ನ ಕೈಯಲ್ಲಿದ್ದ ಬಾಲನ್ನು ಫೆರ್ನಾಂಡೋ ಕೈಗೆ ಎಸೆದರು. ಫೆರ್ನಾಂಡೋ ನಾನ್‌ಸ್ಟ್ರೈಕ್‌ನಲ್ಲಿದ್ದ ವಿಕೆಟ್‌ಗೆ ಮುಟ್ಟಿಸಿದರು. ಔಟಾದ ಬೆನ್ನಲ್ಲೇ ಬೇಸರದಿಂದ 32 ರನ್ ಹೊಡೆದ ಪ್ರಿಯಾಂಶ್ ಆರ್ಯ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇದನ್ನೂ ಓದಿ: 3 ಓವರ್ 3 ವಿಕೆಟ್, 25 ಎಸೆತದಲ್ಲಿ ಸ್ಫೋಟಕ ಫಿಫ್ಟಿ – ಅರ್ಜುನ್ ತೆಂಡೂಲ್ಕರ್ ಬೆಂಕಿ ಬ್ಯಾಟಿಂಗ್, ತಂಡಕ್ಕೆ ಜಯ
Ruturaj Gaikwad’s wicket today was literally stopped by a shoe. 😭💀
Terrible mix-up with Priyansh Arya.
Rutu was gone. Then the wicketkeeper’s shoe blocked Priyansh’s bat from entering the crease.
One shoe changed the fate of a wicket.
Absolute Cinema. 🎥😭👟 pic.twitter.com/rc720GP9tV
— Abhinav MSDian™ (@Abhinav_hariom) June 9, 2026
