ನ್ಯೂಯಾರ್ಕ್: ಮಾಜಿ ನೀಲಿ ತಾರೆ ಮಿಯಾ ಖಲೀಫಾ (Mia Khalifa) ಫಿಫಾ ವಿಶ್ವಕಪ್ ಬಳಿಕ ಮತ್ತೆ ಸುದ್ದಿಯಲ್ಲಿದ್ದಾರೆ. ಫಿಫಾ ವಿಶ್ವಕಪ್ (FIFA World Cup) ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟಿನಾವನ್ನ ಸ್ಪೇನ್ ಸೋಲಿಸಿದ ಬಳಿಕ ಜೀವನದ ಅತಿದೊಡ್ಡ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಭರ್ಜರಿ 15.92 ಕೋಟಿ ರೂ. ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.
Mia Khalifa placed a bet of 1 Million dollars on Spain winning the FIFA
After Spain’s victory she got 1,650,0000$
But twist is, State will tax her winnings which will fund bombs against her own country Lebanon like she cried the other day 🤡😭 pic.twitter.com/38vMWzlJrC
— Chota Don (@choga_don) July 20, 2026
ಹೌದು. ಮಿಯಾ ಖಲೀಫಾ ಇಷ್ಟು ದೊಡ್ಡ ಮೊತ್ತವನ್ನ ಪಡೆದಿದ್ದು ಬೆಟ್ಟಿಂಗ್ ಮೂಲಕ. ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಫೈನಲ್‌ನಲ್ಲಿ ಸ್ಪೇನ್ ತಂಡ ಗೆಲ್ಲುವುದಾಗಿ 9.65 ಕೋಟಿ ರೂ. (ಸುಮಾರು 10 ಲಕ್ಷ ಅಮೆರಿಕನ್ ಡಾಲರ್) ಮೊತ್ತವನ್ನು ಬೆಟ್ಟಿಂಗ್‌ನಲ್ಲಿ ಹೂಡಿಕೆ ಮಾಡಿದ್ದರು. ಅದರ ಸ್ಕ್ರೀನ್‌ಶಾಟ್‌ಗಳನ್ನ ಸೋಷಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ.

ಸ್ಪೇನ್ ತಂಡದ ಮೇಲೆ ನಂಬಿಕೆಯಿಟ್ಟಿದ್ದೆ, ನಿಜವಾಗಿಯೂ ದೊಡ್ಡ ಗೆಲುವು ಸಿಕ್ಕಿತು. ಸ್ಪೇನ್ ನನ್ನ ತಾಯ್ನಾಡಿನಷ್ಟೇ ಹೆಮ್ಮೆ ತಂದಿದೆ. ಆದರೆ ನನ್ನ ದೇಹದಲ್ಲಿ ಸ್ಪ್ಯಾನಿಷ್ ರಕ್ತದ ಒಂದು ಹನಿಯೂ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಟೂರ್ನಿಯುದ್ದಕ್ಕೂ ಸ್ಪೇನ್ ತಂಡವನ್ನ ಮಿಯಾ ಖಲೀಫಾ ಬೆಂಬಲಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಸ್ಪೇನ್ ತಂಡದ ಗೆಲುವಿನಿಂದ ಮಿಯಾ ಖಲೀಫಾಗೆ ಒಟ್ಟು 15.92 ಕೋಟಿ ರೂ. ಸಿಕ್ಕಿದೆ. ಇದರಲ್ಲಿ ಖಲೀಫಾ ಹೂಡಿಕೆ ಮಾಡಿದ್ದು 9.65 ಕೋಟಿ ರೂ., ಲಾಭ 6.27 ಕೋಟಿ ರೂ. ಸೇರಿ ಒಟ್ಟು 15.92 ಕೋಟಿ ರೂ. ಸಿಕ್ಕಿದೆ. ಆದ್ರೆ ಇಷ್ಟು ದೊಡ್ಡ ಮೊತ್ತದ ಹಣ ಗೆದ್ದ ಮಾಜಿ ನೀಲಿ ತಾರೆಗೆ ಈಗ ಭಾರೀ ಟ್ಯಾಕ್ಸ್ ಪಾವತಿ ಮಾಡುವುದೇ ಚಿಂತೆಯಾಗಿದೆ. ಟ್ಯಾಕ್ಸ್ ಮೊತ್ತ ಎಷ್ಟು ಪಾವತಿಸಬೇಕು ಅನ್ನೋ ಮಾಹಿತಿ ಬಹಿರಂಗವಾಗಿಲ್ಲ.
