ಮೈಸೂರು: ಅಂಡರ್-19 ಭಾರತ ಕ್ರಿಕೆಟ್ ತಂಡದ ನಾಯಕ ಆಯುಷ್ ಮ್ಹಾತ್ರೆ (Ayush Mhatre) ಅವರು ಅವಧೂತ ಶ್ರೀ ಅರ್ಜುನ ಗುರೂಜಿ ಅವರನ್ನು ಭೇಟಿಯಾದರು.
ಶನಿವಾರ (ಜೂ.6) ಮೈಸೂರಿನ (Mysuru) ಗುರು ನಿವಾಸದಲ್ಲಿ ಅವಧೂತ ಶ್ರೀ ಅರ್ಜುನ ಗುರೂಜಿ ಅವರನ್ನು ಆಯುಷ್ ಮಾತ್ರೆ ತಮ್ಮ ಕುಟುಂಬ ಮತ್ತು ಗೆಳೆಯರೊಂದಿಗೆ ಭೇಟಿ ಮಾಡಿ, ಆಶೀರ್ವಾದ ಪಡೆದರು. ಬಳಿಕ ಭಾನುವಾರ (ಜೂ.7) ಮೈಸೂರಿನ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ಲೋಕಾ ಕಲ್ಯಾಣಕ್ಕಾಗಿ ಲಲಿತಾ ಪರಮೇಶ್ವರಿ ಅಮ್ಮನವರಿಗೆ ಹರಿದ್ರಾ (ಅರಿಶಿನ) ಅರ್ಚನೆ ನಡೆಯಿತು. ಈ ವೇಳೆ ಭಾಗಿಯಾಗಿ, ಅಮ್ಮನವರ ಆಶೀರ್ವಾದ ಪಡೆದರು. ಇದನ್ನೂ ಓದಿ: ಲೋಕ ಕಲ್ಯಾಣಕ್ಕಾಗಿ ಲಲಿತಾ ಪರಮೇಶ್ವರಿಗೆ ಹರಿದ್ರಾ ಅರ್ಚನೆ – ಭಾಗಿಯಾಗಿದ್ದ ಭಕ್ತರಿಗೆ ಸಾಲಿಗ್ರಾಮ, ತಿರುಪತಿ ಲಡ್ಡು ವಿತರಣೆ

ಆಯುಷ್ ಮ್ಹಾತ್ರೆ 2024ರ ಏಷ್ಯಾ ಕಪ್‌ನಲ್ಲಿ ಮೂರು ಪಂದ್ಯಗಳನ್ನಾಡುವ ಮೂಲಕ ಭಾರತದ ಅಂಡರ್-19 ತಂಡದಲ್ಲಿ ತಮ್ಮ ಛಾಪು ಮೂಡಿಸಿದರು. ಬಳಿಕ 2024ರ ಇರಾನಿ ಕಪ್‌ಗೆ ಪಾದಾರ್ಪಣೆ ಮಾಡಿ, ರುತುರಾಜ್ ಗಾಯಕ್ವಾಡ್ ನೇತೃತ್ವದ ಮಹಾರಾಷ್ಟ್ರ ತಂಡದ ವಿರುದ್ಧ 176 ರನ್‌ಗಳ ಭರ್ಜರಿ ಶತಕ ಸಿಡಿಸಿದ್ದಾರೆ.
ಐಪಿಎಲ್ 2025ರ ಅವಧಿಯಲ್ಲಿ 17 ವರ್ಷದವರಾಗಿದ್ದ ಆಯುಷ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ರುತುರಾಜ್ ಗಾಯಕ್ವಾಡ್ ಅವರಿಗೆ ಬದಲಿ ಆಟಗಾರನಾಗಿ 30 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿತು. ಸಿಎಸ್‌ಕೆ ಪರ ಕಣಕ್ಕಿಳಿದ ಅವರು ಆಡಿದ ಏಳು ಪಂದ್ಯಗಳಲ್ಲಿ 94 ರನ್‌ಗಳ ಗರಿಷ್ಠ ಸ್ಕೋರ್‌ನೊಂದಿಗೆ ಒಟ್ಟು 240 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಸದ್ಯ ಐಸಿಸಿ ಅಂಡರ್-19 ವಿಶ್ವಕಪ್ ವಿಜೇತ ನಾಯಕನಾಗಿರುವ ಆಯುಷ್ ಮಾತ್ರೆ, ಐಪಿಎಲ್ 2026ರಲ್ಲೂ (IPL 2026) ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಆಯುಷ್ ಉತ್ತಮ ಪ್ರದರ್ಶನ ನೀಡಿದ್ದಾರೆ.ಇದನ್ನೂ ಓದಿ :3 ಓವರ್ 3 ವಿಕೆಟ್, 25 ಎಸೆತದಲ್ಲಿ ಸ್ಫೋಟಕ ಫಿಫ್ಟಿ – ಅರ್ಜುನ್ ತೆಂಡೂಲ್ಕರ್ ಬೆಂಕಿ ಬ್ಯಾಟಿಂಗ್, ತಂಡಕ್ಕೆ ಜಯ
