ಮುಂಬೈ: ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್(Arjun Tendulkar) ಅವರು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ.
ಸೋಮವಾರ ರಾತ್ರಿ ಟಿ20 ಮುಂಬೈ ಲೀಗ್‌ನ ಬಾಂದ್ರಾ ಬ್ಲ್ಯಾಸ್ಟರ್ಸ್(Bandra Blasters) ಮತ್ತು ಎಆರ್‌ಸಿಎಸ್ ಅಂಧೇರಿ(ARCS Andheri) ತಂಡಗಳ ಮಧ್ಯೆ ಪಂದ್ಯ ನಡೆದಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಬಾಂದ್ರಾ 9 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ಈ ಇನ್ನಿಂಗ್ಸ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಮೊದಲ ಓವರ್ ಎಸೆದಿದ್ದು ಅಲ್ಲದೇ ತಮ್ಮ 4 ಓವರ್ ಕೋಟಾದಲ್ಲಿ 1 ಮೇಡನ್ ಮಾಡಿ 11 ರನ್ ನೀಡಿ 3 ವಿಕೆಟ್ ಪಡೆದಿದ್ದರು.
Meet Arjun Tendulkar, the son of the great Sachin Tendulkar. He could easily live on his dad’s money. But he chose hard work and dedication towards cricket.
He smashed 60+ with the bat and 3/11 in 3 overs in bowling today in the Mumbai league. Mad Respect 🫡❤️ pic.twitter.com/3dxy4KR1pm
— HK (@potter_here18) June 8, 2026
ಸುಲಭದ ಸವಾಲನ್ನು ಬೆನ್ನಟ್ಟಿದ್ದ ಅಂಧೇರಿ 13.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 148 ರನ್ ಹೊಡೆದು ಜಯಗಳಿಸಿತು. ಇದನ್ನೂ ಓದಿ: 2 ಬಾರಿ ಚಾಂಪಿಯನ್ ಆದ್ರೂ ಟೀಂ ಇಂಡಿಯಾಗೆ ಆಯ್ಕೆ ಆಗಿಲ್ಲ ಯಾಕೆ- ಪಟಿದಾರ್ ಕೈ ಬಿಟ್ಟಿದ್ದನ್ನು ಸಮರ್ಥಿಸಿದ ಅಗರ್ಕರ್
