– ಗುಂಡಿ ಮುಚ್ಚೋಕೆ ವಾರ್ಡ್ಗೆ 75 ಲಕ್ಷ ರೂ. ಮೀಸಲು
ಬೆಂಗಳೂರು: ಸಿಲಿಕಾನ್ ಸಿಟಿಯ ಅರೆಬರೆ ರಸ್ತೆ ಕಾಮಗಾರಿಯಿಂದ ಬೇಸತ್ತು ಹೋದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಡಿಸೆಂಬರ್ ಒಳಗೆ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಚಿವ ಕೃಷ್ಣಬೈರೇಗೌಡ (Krishna Byre Gowda) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
2,300 ಕಿ.ಮೀ. ಬಾಕಿ ಇರುವ ರಸ್ತೆಯ ದುರಸ್ತಿ ಡಾಂಬರೀಕರಣಕ್ಕೆ ಜನವರಿ, ಫೆಬ್ರವರಿ ಡೆಡ್ಲೈನ್ ಕೊಡಲಾಗಿತ್ತು. ಇದುವರೆಗೆ 4,200 ಕೋಟಿ ಅನುದಾನ ಬಿಡುಗಡೆಯಾಗಿದೆ. ಇನ್ನು ವಾರ್ಡ್-1 ಅಭಿಯಾನ ನಡೆಯುತ್ತಿದ್ದು, ಈಗಾಗಲೇ ಗುಂಡಿ ಮುಚ್ಚೋಕೆ ವಾರ್ಡ್ಗೆ 75 ಲಕ್ಷ ಮೀಸಲಾಗಿಲಾಗಿದೆ. ಇದನ್ನೂ ಓದಿ: ಪರಿಸರವಾದಿಗಳ ಹೋರಾಟಕ್ಕೆ ಮಣಿದ ಸರ್ಕಾರ – ಲಾಲ್ಬಾಗ್ನಲ್ಲಿ ಸುರಂಗ ಮಾರ್ಗ ನಿರ್ಮಾಣ ಇಲ್ಲ
ಡಿಸೆಂಬರ್ ಒಳಗೆ ಮತ್ತೆ ಗುಂಡಿ ಮುಚ್ಚೋಕೆ ಡೆಡ್ಲೈನ್ ಕೊಡಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ರಸ್ತೆ ಕಾಮಗಾರಿ ವಿಳಂಬಕ್ಕೆ ತರಾಟೆಯನ್ನು ತೆಗೆದುಕೊಂಡರು.
ಇದರ ಮಧ್ಯೆ, ರಾಜಕಾಲುವೆ ಒತ್ತುವರಿಯೂ ಆಗಿದೆ. ಹಲವೆಡೆ ರಾಜಕಾಲುವೆಯೇ ಇಲ್ಲ ಅಂತಾ ಸ್ವತಃ ಸಚಿವರೇ ಶಾಕ್ನಿಂದ ಹೇಳಿದರು. 22 ಎಕರೆ ಒತ್ತುವರಿ ಗಮನಕ್ಕೆ ಬಂದಿದ್ದು, ಈಗಾಗಲೇ ತೆರವಿಗೂ ಸೂಚಿಸಿದ್ದೇನೆ ಎಂದರು.
