ಮೆಕ್ಸಿಕೋ ಸಿಟಿ: ಕ್ರೀಡಾಲೋಕದ ಅತ್ಯಂತ ರೋಮಾಂಚಕ ಹಾಗೂ ಪ್ರತಿಷ್ಠಿತ ಕ್ರೀಡಾಕೂಟ 2026ರ ಫಿಫಾ ವಿಶ್ವಕಪ್ (FIFA World Cup) ಇಂದಿನಿಂದ (ಜೂ.11) ಆರಂಭವಾಗಲಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಮೂರು ರಾಷ್ಟ್ರಗಳಾದ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಜಂಟಿಯಾಗಿ ಈ ಜಾಗತಿಕ ಫುಟ್‌ಬಾಲ್ ಹಬ್ಬವನ್ನು ಆಯೋಜಿಸುತ್ತಿವೆ. ಮೆಕ್ಸಿಕೋ ಸಿಟಿಯ (Mexico City) ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಇಂದಿನ ಪಂದ್ಯ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ (Mexico) ತಂಡವು ಸೌತ್ ಆಫ್ರಿಕಾ (South Africa) ಎದುರು ಕಣಕ್ಕಿಳಿಯಲಿದೆ. ಇದನ್ನೂ ಓದಿ: ಮಹಾನ್ ನಾಯಕ: ದೀರ್ಘಾವಧಿ ಪ್ರಧಾನಿಯಾಗಿ ದಾಖಲೆ ಬರೆದ ಮೋದಿಗೆ ಟ್ರಂಪ್ ಅಭಿನಂದನೆ

ಈ ಬಾರಿಯ ವಿಶ್ವಕಪ್‌ನ ಪ್ರಮುಖ ವಿಶೇಷತೆಗಳು:
ಇದುವರೆಗೆ ಕೇವಲ 32 ತಂಡಗಳು ಮಾತ್ರ ಭಾಗವಹಿಸುತ್ತಿದ್ದ ವಿಶ್ವಕಪ್‌ನಲ್ಲಿ, ಈ ಬಾರಿ ದಾಖಲೆಯ 48 ರಾಷ್ಟ್ರಗಳು ಕಣಕ್ಕಿಳಿಯುತ್ತಿವೆ. ಹೀಗಾಗಿ ಪಂದ್ಯಗಳ ರೋಮಾಂಚನ ದುಪ್ಪಟ್ಟಾಗಲಿದೆ. ಒಟ್ಟು 39 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಕಪ್‌ಗಾಗಿ 104 ಪಂದ್ಯಗಳು ಜರುಗಲಿವೆ. ಜು.19ರಂದು ನ್ಯೂಜೆರ್ಸಿಯಲ್ಲಿ (New Jersey) ಹೈ-ವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ.
🏆✨#FIFAWorldCup pic.twitter.com/xNMKrd0h1R
— FIFA World Cup (@FIFAWorldCup) June 9, 2026
ತಂಡಗಳನ್ನು ತಲಾ ನಾಲ್ಕರಂತೆ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಹಾಗೂ ಮೂರನೇ ಸ್ಥಾನ ಪಡೆಯುವ 8 ಅತ್ಯುತ್ತಮ ತಂಡಗಳು ನಾಕೌಟ್ (ರೌಂಡ್ ಆಫ್ 32) ಹಂತಕ್ಕೆ ಲಗ್ಗೆ ಇಡಲಿವೆ.

ಫುಟ್‌ಬಾಲ್ ಲೋಕದ ಶ್ರೇಷ್ಠ ಆಟಗಾರರಾದ ಲಿಯೋನೆಲ್ ಮೆಸ್ಸಿ (Lionel Messi) (ಅರ್ಜೆಂಟೀನಾ) ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) (ಪೋರ್ಚುಗಲ್) ಆಡಲಿರುವ ಕೊನೆಯ ವಿಶ್ವಕಪ್ ಇದಾಗಿರಲಿದೆ ಎನ್ನಲಾಗಿದೆ. ಡಿಫೆಂಡಿಂಗ್ ಚಾಂಪಿಯನ್ ಅರ್ಜೆಂಟೀನಾ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಿದರೆ, ಬ್ರೆಜಿಲ್, ಫ್ರಾನ್ಸ್ ಮತ್ತು ಸ್ಪೇನ್ ತಂಡಗಳು ಪ್ರಬಲ ಪೈಪೋಟಿ ನೀಡಲು ಸಜ್ಜಾಗಿವೆ.ಇದನ್ನೂ ಓದಿ: ಐರ್ಲೆಂಡ್, ಇಂಗ್ಲೆಂಡ್ ಟಿ20 ಸರಣಿ: ಸಿರಾಜ್ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಯ್ಕೆ
