ನವದೆಹಲಿ: ಅಭಿವೃದ್ಧಿ ಅಂತಿಮವಾಗಿ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದರು.
ನೀತಿ ಆಯೋಗದ (NITI Aayog) ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ಅಭಿವೃದ್ಧಿಯಿಂದ ಜನರ ಜೀವನದ ಗುಣಮಟ್ಟ ಸುಧಾರಿಸಬೇಕು ಎಂಬುದು ಕರ್ನಾಟಕ ಆಡಳಿತದ ತತ್ವವಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬಂಡವಾಳದ ಗುಣಮಟ್ಟ ಅತ್ಯುತ್ತಮವಾಗಿ ಸುಧಾರಿಸಿದೆ ಎಂದರು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ – ಅರ್ಜಿ ಸಲ್ಲಿಸಲು ಸೂಚನೆ
At the 11th Governing Council Meeting of NITI Aayog, Chief Minister Shri @DKShivakumar presented Karnataka’s vision for Inclusive Human Development and Viksit Bharat @ 2047.
From the Guarantee Model to education, skilling, innovation, industry and human capital development,… pic.twitter.com/GApE4kGARe
— CM of Karnataka (@CMofKarnataka) June 11, 2026
ಇತ್ತಿಚೆಗೆ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ಯೋಜನೆ ಘೋಷಿಸಲಾಗಿದೆ. ಬಜೆಟ್‌ನಲ್ಲಿ 24% ಅನುದಾನ ಮೀಸಲಿಟ್ಟಿದ್ದು ದುರ್ಬಲ ವರ್ಗಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಬಡವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಿದೆ. ದ್ವಿಭಾಷಾ ನೀತಿ ಅಳವಡಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್‌ನಂತಹ ಕ್ಷೇತ್ರಗಳನ್ನು ಪ್ರೊತ್ಸಾಹಿಸುತ್ತಿದ್ದೇವೆ. ಡಿಜಿಟಲ್ ಮೂಲಸೌಕರ್ಯ ನಮ್ಮ ಆದ್ಯತೆಯಾಗಿದೆ. ಆಡಳಿತ ಸುಧಾರಣೆಗೆ ಎಐ ತಂತ್ರಜ್ಞಾನ ಬಳಸಿಕೊಂಡಿದ್ದೇವೆ ಎಂದರು. ಇದನ್ನೂ ಓದಿ: PUBLiC TV Impact – ರಾಜ್ಯದಲ್ಲಿ 10 ಕೆಜಿ ಅಕ್ಕಿ ವಿತರಣೆಗೆ ಸರ್ಕಾರ ಆದೇಶ
