ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda Airport) ಇಂಡಿಗೋ ವಿಮಾನದ (Indigo Flight) ಶೌಚಾಲಯದ ಒಳಗೆ ಬಾಂಬ್ ಬೆದರಿಕೆಯ ಚೀಟಿ ಪತ್ತೆಯಾಗಿದೆ.
ಗುರುವಾರ (ಜು.16) ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ 6E-6423 (BLR-AMD) ವಿಮಾನದ ಶೌಚಾಲಯದ ಒಳಗೆ ಬೆದರಿಕೆಯ ಚೀಟಿ ಪತ್ತೆಯಾಗಿದೆ. ಪತ್ತೆಯಾದ ಚೀಟಿಯಲ್ಲಿ “ದಯವಿಟ್ಟು ಹೋಗಬೇಡಿ, ಬಾಂಬ್ ಇದೆ” ಎಂದು ಬರೆದಿದೆ. ವಿಚಾರ ಗೊತ್ತಾಗಿ ಪ್ರಯಾಣಿಕರು ಭಯಭೀತರಾಗಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸಂಪುಟ ವಿಸ್ತರಣೆ ಪ್ರಾಥಮಿಕ ಚರ್ಚೆ; ಪ್ರತ್ಯೇಕ ಪಟ್ಟಿ ಕಳುಹಿಸಲು ಸಿಎಂ, ಮಾಜಿ ಸಿಎಂಗೆ ಸೂಚನೆ
ಬೆದರಿಕೆಯ ಚೀಟಿ ಪತ್ತೆಯಾದ ಹಿನ್ನೆಲೆ ಸಂಜೆ 7:30ಕ್ಕೆ ಹೊರಡಬೇಕಿದ್ದ ವಿಮಾನ ಐದು ಗಂಟೆ ತಡವಾಗಿ ಟೇಕ್ ಆಫ್ ಆಗಿದೆ. ಈ ಸಂಬಂಧ ಎಟಿಸಿಯಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಓರ್ವ ಪ್ರಯಾಣಿಕನೇ ಈ ಚೀಟಿ ಬರೆದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಯಾಣಿಕನ ವಿರುದ್ಧ ದೂರು ದಾಖಲಾಗಿದೆ.
