ನವದೆಹಲಿ/ಬೆಂಗಳೂರು: ಡಿ.ಕೆ.ಶಿವಕುಮಾರ್ (D.K.Shivakumar) ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ (Cabinet Expansion) ಸಂಬಂಧಿಸಿದಂತೆ ದೆಹಲಿಯಲ್ಲಿ ಈಚೆಗೆ ನಡೆದಿದ್ದು, ಪ್ರಾಥಮಿಕ ಚರ್ಚೆಯಷ್ಟೇ. ಪ್ರತ್ಯೇಕ ಪಟ್ಟಿಯನ್ನು ಕಳುಹಿಸುವಂತೆ ಸಿಎಂ ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೆ (Siddaramaiah) ಹೈಕಮಾಂಡ್ ಸೂಚನೆ ನೀಡಿದೆ.
ಸಿಎಂ ಮತ್ತು ಮಾಜಿ ಸಿಎಂ ಕಳುಹಿಸುವ ಪಟ್ಟಿ ಇಟ್ಟುಕೊಂಡು ಸೋಮವಾರದ ನಂತರ ಹೈಕಮಾಂಡ್ ಚರ್ಚೆ ನಡೆಸಲಿದೆ. ಮಲ್ಲಿಕಾರ್ಜುನ್ ಖರ್ಗೆ ಜೊತೆ ರಾಹುಲ್ ಗಾಂಧಿ (Rahul Gandhi) ಚರ್ಚಿಸಲಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಆಪರೇಷನ್ ಕಮಲದಿಂದ ಆದ ಸಿಎಂ, ಮೈತ್ರಿಯಿಂದ ಹೊರಗೆ ಬಂದು ತೊಡೆ ತಟ್ಟಲಿ: ಚಲುವರಾಯಸ್ವಾಮಿ ಸವಾಲ್
ಅಗತ್ಯ ಬಿದ್ದರೆ ಸಿಎಂ-ಮಾಜಿ ಸಿಎಂ ಇಬ್ಬರಿಗೂ ದೆಹಲಿಗೆ ಬುಲಾವ್ ನೀಡುವ ಸಾಧ್ಯತೆ ಇದೆ. ಹೈಕಮಾಂಡ್‌ಗೆ ಒಪ್ಪಿಗೆಯಾದ್ರೆ ಮುಂದಿನ ವಾರ ಅಂತಿಮ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.
ಇಬ್ಬರ ಪಟ್ಟಿ ಹೈಕಮಾಂಡ್‌ಗೆ ಸಮಾಧಾನ ತಂದರೆ ಮುಂದಿನ ವಾರ ಅಂತಿಮ ಪಟ್ಟಿಯನ್ನು ರಾಜ್ಯಕ್ಕೆ ಹೈಕಮಾಂಡ್ ನಾಯಕರು ಕಳುಹಿಸಿಕೊಡಲಿದ್ದಾರೆ. ಮುಂದಿನ ಬೆಳವಣಿಗೆ ಹೀಗಿರಲಿದೆ ಎಂದು ಸಿಎಂ ಹಾಗೂ ಮಾಜಿ ಸಿಎಂಗೆ ಎಐಸಿಸಿ ನಾಯಕರು ಸ್ಪಷ್ಟ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: 120 ಸ್ಥಾನ ಪಡೆಯೋ ಕಾಲವೂ ಬರುತ್ತೆ, ಅಲ್ಲಿವರೆಗೂ ನಾನೇನು ಸಾಯಲ್ಲ: ಹೆಚ್‌ಡಿಕೆ ತಿರುಗೇಟು
