ಡಿಯರ್ ಆಶಾ
ದಿನಕ್ಕೆ ಒಮ್ಮೆ ಆದ್ರೂ ನಿನ್ನ ಬಗ್ಗೆ ಯಾರ ಹತ್ರ ಆದ್ರೂ ಹೇಳ್ತಾ ಇರ್ತಿನಿ. ನಮ್ ಹುಡ್ಗಿ ಅವತ್ತು ಹೀಗೆ ಹೇಳಿದ್ಲು, ಅವಳಿಗೆ ಈ ಹಾಡು ಇಷ್ಟ. ಅವಳಿಗೆ ಈ ಹೂವು ಇಷ್ಟ. ಅವಳಿಗೆ ಈ ಕಲರ್ ತುಂಬಾ ಇಷ್ಟ. ಇದೇ ಮಾತನ್ನ ಅದೆಷ್ಟು ಸಲ ಹೇಳಿದಿನೋ ನೆನಪಿಲ್ಲ.
ಬಹುಶಃ ನನ್ನ ಜೀವನದ ಬಹು ದೊಡ್ಡ ಪಾಲನ್ನ ನೀನು ಆವರಿಸಿಕೊಂಡು ಬಿಟ್ಟಿದಿಯಾ ನೋಡು. ಆದ್ರೂ ನೀನು ನನ್ನ ಕಣ್ಣಿಂದ ಇವತ್ತು ತಪ್ಪಿಸಿಕೊಂಡು ತುಂಬಾ ದೂರ ಹೋಗಿದಿಯಾ. ಆದ್ರೂ ನನ್ನ ಹೃದಯದಿಂದ ನಿನಗೆ ತಪ್ಪಿಸಿಕೊಳ್ಳೋಕೆ ಆಗಿಲ್ಲ. ಈ ಪ್ರೇಮದ ಶಕ್ತಿಯೇ ಹಾಗೆ.. ವಿಚಿತ್ರ. ಇದನ್ನೂ ಓದಿ: ಹೃದಯದಲ್ಲಿ ಒಲವಿನ ಹೆಜ್ಜೆಗಳನ್ನಿಟ್ಟ ನಿನ್ನ ಪಾದಗಳಿಗೆ..!

ಹೀಗೆಲ್ಲ ನೀನು ನೆನಪಾದಾಗೆಲ್ಲ ʻಜಿಂದಗಿ ಕುಚ್ ಬಿ ನಹಿ, ತೆರಿ ಮೇರಿ ಕಹಾನಿ ಹೆ, ಏಕ್ ಪ್ಯಾರ್ ಕಾ ನಗ್ಮಾ ಹೇʼ (Ek Pyar Ka Nagma Hai) ಈ ಹಾಡು ಹಾಗೇ ಮನಸ್ಸಲ್ಲಿ ಪ್ಲೇ ಆಗುತ್ತೆ.
ಹೌದು ನನಗೆ ಈಗ ಜೀವನ ಅಂತ ಬೇರೇ ಏನೂ ಇಲ್ಲ. ಅಲ್ಲಿ ಉಳಿದಿರೋದು ನಿನ್ನದೇ ನೆನಪು. ನಮ್ಮಿಬ್ಬರದ್ದೇ ಕತೆ. ನೀನು ನನ್ನ ಜೊತೆಗಿದ್ದ ಪ್ರತಿ ಕ್ಷಣವನ್ನೂ ನಾನೀಗಲೂ ಎಂಜಾಯ್ ಮಾಡ್ತೀನಿ. ಅದಕ್ಕೇ ಬದುಕಿನ ನಡು ದಾರಿಯಲ್ಲಿ ಅರ್ಧಕ್ಕೆ ಬಿಟ್ಟು ಹೋದ ನಿನ್ನ ಮೇಲೆ ನನಗೆ ಯಾವ ಬೇಸರವೂ ಇಲ್ಲ. ಇದನ್ನೂ ಓದಿ: ತುಂಬಾ ಕಾಯ್ತಿದಿನಿ… ಎಲ್ಲಾದ್ರೂ ಕಣ್ಣಿಗೆ ಬೀಳಬಾರದ ನೀನು?
ನಿನ್ನ ನನ್ನ ಕೊನೆಯ ಭೇಟಿ ನನಗಿನ್ನೂ ನೆನಪಿದೆ. ಆ ದಿನ ನೀನು ಹೋಗುವಾಗ ಒಮ್ಮೆ ತಿರುಗಿ ನೋಡಿದ್ಯಲ್ಲ.. ಆಗ ನಿನ್ನ ಕಣ್ಣಲ್ಲಿ ಬೆಳಗುತ್ತಿದ್ದ ಹಣತೆ ಇನ್ನೂ ನನ್ನ ಹೃದಯದ ಕಪಾಟಲ್ಲಿ ಹಾಗೇ ಇದೆ. ಆ ಕಡು ನೀಲಿ ಬಣ್ಣದ ಚೂಡಿಯಲ್ಲಿ ಅದೆಷ್ಟು ಕಂಗೊಳಿಸ್ತಿದ್ದೆ ಗೊತ್ತಾ ನೀನು.
ಅಕಸ್ಮಾತ್ ಮತ್ತೆನಾದ್ರೂ ನೀನು ಸಿಕ್ಬಿಟ್ರೆ ಅದೆಷ್ಟು ಚೆಂದದ ಮಾತು – ಕತೆಗಳು, ಪುಟ್ಟಪುಟ್ಟ ಗಲಾಟೆಗಳಿಲ್ಲದೇ ಖಾಲಿ ಖಾಲಿ ಹೊಡೆಯುತ್ತಿರುವ ಜೀವನಕ್ಕೆ ಒಂದಷ್ಟು ಪರಿಪೂರ್ಣತೆ ಸಿಗಬಹುದೇನೋ..! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ ನಿನ್ನ
ಚೆಲ್ಲಾಟಕ್ಕೆ ಕಾದು ಕುಳಿತ ಗೆಳೆಯ
