ಕೊಪ್ಪಳ: ಇಂದು ಪ್ರಧಾನಿ ಮೋದಿ (PM Modi) ವರ್ಚುವಲ್ ಮೂಲಕ ಉದ್ಘಾಟಿಸಬೇಕಿದ್ದ ಕೊಪ್ಪಳ (Koppal) ರೈಲ್ವೆ ನಿಲ್ದಾಣದಲ್ಲಿ (Railway Station) ಮಳೆ ನೀರು ಸೋರಿಕೆಯಾಗಿದೆ.
ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ವೇದಿಕೆ, ಸೌಂಡ್ ಸಿಸ್ಟಮ್ ಅಳವಡಿಸಲಾಗಿತ್ತು. ಅಲ್ಲದೇ ಚೇರ್‌ಗಳನ್ನು ಹಾಕಲಾಗಿತ್ತು. ಆದರೆ ಗುರುವಾರ (ಜು.16) ಸುರಿದ ಮಳೆಯಿಂದಾಗಿ ರೈಲ್ವೆ ನಿಲ್ದಾಣದಲ್ಲಿ ನೀರು ಸೋರಿಕೆಯಾಗಿದ್ದು, ಸೌಂಡ್ ಬಾಕ್ಸ್, ಚೇರ್‌ಗಳೆಲ್ಲವೂ ನೀರಿನಲ್ಲಿ ನಿಂತಿವೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಬೆದರಿಕೆ – ಇಂಡಿಗೋ ವಿಮಾನದ ಶೌಚಾಲಯದಲ್ಲಿ ಚೀಟಿ ಪತ್ತೆ
ಸದ್ಯ ರೈಲ್ವೇ ನಿಲ್ದಾಣದ ಕಳಪೆ ಕಾಮಗಾರಿ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
