ಮುಂಬೈ: ಭಾರತೀಯ ನೌಕಾಪಡೆಯ 30 ವರ್ಷದ ಸಿಬ್ಬಂದಿಯೊಬ್ಬರು (Navy Sailor) ತಮ್ಮ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ ಅಥವಾ ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತರನ್ನು 30 ವರ್ಷದ ಪೂರಣ್ಮಲ್ ಶಂಭುಲಾಲ್ ಮೆಹ್ರಾ, ಅವರ 28 ವರ್ಷದ ಪತ್ನಿ ಓಮಾ ಪೂರಣ್ಮಲ್ ಮೆಹ್ರಾ, 3 ವರ್ಷದ ಪುತ್ರ ಯಶ್ ಪೂರಣ್ಮಲ್ ಮೆಹ್ರಾ ಹಾಗೂ ಎರಡು ತಿಂಗಳ ಮಗು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 110 ದೇಶಗಳ ಐಫೋನ್ ಬಳಕೆದಾರರಿಗೆ ಥ್ರೆಟ್ ಅಲರ್ಟ್: ಏನಿದು ನೋಟಿಫಿಕೇಶನ್? ಬಂದರೆ ಏನು ಮಾಡಬೇಕು
ಮುಂಬೈನ ಕೊಲಾಬಾದಲ್ಲಿರುವ (Colaba) ಅತ್ಯಂತ ಭದ್ರತಾ ವ್ಯವಸ್ಥೆ ಹೊಂದಿರುವ ನೇವಿ ನಗರದ (Navy Nagar) ಕ್ಯಾಂಟೋನ್ಮೆಂಟ್ ಪ್ರದೇಶದಲ್ಲಿನ ಅಪಾರ್ಟ್ಮೆಂಟ್‌ನಲ್ಲಿ ನಾಲ್ವರೂ ಶವವಾಗಿ ಪತ್ತೆಯಾಗಿದ್ದಾರೆ. ಆಗಸ್ಟ್ 15ರ ಶನಿವಾರ ಘಟನೆ ಬೆಳಕಿಗೆ ಬಂದಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಗಂಡ ಅಂತ್ಯಸಂಸ್ಕಾರಕ್ಕೆ ಬರಬಾರದು – ಡೆತ್‌ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ
ಪ್ರಾಥಮಿಕ ತನಿಖೆಯ ಪ್ರಕಾರ, ನೌಕಾಪಡೆ ಸಿಬ್ಬಂದಿ ಪೂರಣ್ಮಲ್ ಮೆಹ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹಗಳನ್ನು ಮುಂಬೈನ ಜೆಜೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ನಾಲ್ವರ ಸಾವಿಗೆ ನಿಖರ ಕಾರಣವೇನು ಎಂಬುದು ಪೋಸ್ಟ್ ಮಾರ್ಟಂ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ. ಇದನ್ನೂ ಓದಿ: ವಂದೇ ಮಾತರಂಗೆ ಅಪಮಾನ ಆರೋಪ; ಮಂಗಳೂರಲ್ಲಿ ಸೋನಿಯಾ ಗಾಂಧಿ ವಿರುದ್ಧ ದೂರು
ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಮನೀಷ್ ಕಲ್ವಾನಿಯಾ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ನೌಕಾಪಡೆ ಸಿಬ್ಬಂದಿ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದ್ದು, ಅವರ ಪತ್ನಿ ಮತ್ತು ಮಕ್ಕಳ ಸಾವಿಗೆ ವಿಷಪ್ರಾಶನ ಕಾರಣವಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಕುಟುಂಬದ ಹಿನ್ನೆಲೆ, ಘಟನೆಗೂ ಮುನ್ನ ನಡೆದ ಬೆಳವಣಿಗೆಗಳು ಹಾಗೂ ಸಾವಿಗೆ ಕಾರಣವಾಗಿರಬಹುದಾದ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದನ್ನೂ ಓದಿ: ಮೊಳಕಾಲ್ಮೂರು ಕ್ಷೇತ್ರ ಆಂಧ್ರಕ್ಕೆ ಸೇರಿಸಲಿ: ಎನ್‌ವೈ ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ
ಈ ಕುರಿತು ಭಾರತೀಯ ನೌಕಾಪಡೆಯೂ ಹೇಳಿಕೆ ನೀಡಿದ್ದು, ಆಗಸ್ಟ್ 15ರಂದು ಕೊಲಾಬಾದ ನೇವಿ ನಗರದಲ್ಲಿರುವ ನಿವಾಸದಲ್ಲಿ ನೌಕಾಪಡೆಯ ಸಿಬ್ಬಂದಿಯೊಬ್ಬರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ ಎಂದು ತಿಳಿಸಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು, ತನಿಖೆಗೆ ಭಾರತೀಯ ನೌಕಾಪಡೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ರೈಲಿನಲ್ಲೇ ಭಾರೀ ಹೈಡ್ರಾಮಾ, RPF ಸಿಬ್ಬಂದಿ ಬಟ್ಟೆ ಬಿಚ್ಚಿ, ರೇಜರ್‌ನಿಂದ ಹಲ್ಲೆ; ನಟಿ ಅಂತರಾ ಬ್ಯಾನರ್ಜಿ ಅರೆಸ್ಟ್
ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಹಾಗೂ ತನಿಖೆಯ ಮುಂದಿನ ಹಂತಗಳಲ್ಲಿ ಕುಟುಂಬದ ನಾಲ್ವರ ಸಾವಿನ ನಿಖರ ಕಾರಣ ಮತ್ತು ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಬೇಟೆಗೆ ಬಂದವರು ವೀರಪ್ಪನ್ ಮಟ್ಟದವರಾ?- ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ
