ಬೆಂಗಳೂರು: ವಾಲ್ಮೀಕಿ ನಿಗಮ ಬಹುಕೋಟಿ ಹಗರಣ (Valmiki Corporation Scam) ಪ್ರಕರಣ ಸಂಬಂಧ ಇ.ಡಿ (ED) ಮುಂದೆ ಹಾಜರಾದ ಮಾಜಿ ಸಚಿವ ಬಿ.ನಾಗೇಂದ್ರ (B.Nagendra) ಸತತ 4 ಗಂಟೆಗಳ ವಿಚಾರಣೆ ಎದುರಿಸಿದ್ದಾರೆ.
ವಿಚಾರಣೆಗೆ ಹಾಜರಾಗಲು ಇ.ಡಿ ಸಮನ್ಸ್ ನೀಡಿತ್ತು. ಚಾರ್ಜ್‌ಶೀಟ್ ಬಳಿಕ ಮತ್ತಷ್ಟು ಮಾಹಿತಿ ಕೇಳಲು ಸಮನ್ಸ್ ನೀಡಿತ್ತು. ಮಧ್ಯಾಹ್ನ 2 ಗಂಟೆಗೆ ನಾಗೇಂದ್ರ ವಿಚಾರಣೆಗೆ ಹಾಜರಿದ್ದರು. ಇದನ್ನೂ ಓದಿ: ಬಳ್ಳಾರಿಯ ಚಲಾವಣೆ ಇಲ್ಲದ ಲೀಡರ್ಸ್.. ನಿನ್ನ ಬಗ್ಗೆ ಬಿಚ್ಚಿಡ್ಲಾ? ಬಿಚ್ಚಿಡ್ತೀನಿ: ರೆಡ್ಡಿ, ರಾಮುಲು ವಿರುದ್ಧ ನಾಗೇಂದ್ರ ಕೆಂಡ
ಇಡಿ ವಿಚಾರಣೆ ಮುಗಿಸಿ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ನಾಗೇಂದ್ರ, ಕಳೆದ ಬಾರಿ ಸಮನ್ಸ್ ಕೊಟ್ಟಿದ್ರು, ಬರಲು ಆಗಲಿಲ್ಲ. ಕೆಲವೊಂದು ಸ್ಪಷ್ಟನೆ ಕೊಡಬೇಕಿತ್ತು. ಅದಕ್ಕೆ ಈಗ ಬಂದು ಅವರಿಗೆ ಉತ್ತರ ಕೊಟ್ಟಿದ್ದೇನೆ. ಮತ್ತೊಮ್ಮೆ ಕರೆದಾಗ ಬರ್ತೇನೆ, ನಮ್ಮದು ಏನೂ ಪಾತ್ರ ಇಲ್ಲ. ಸಾವಿರ ಪರ್ಸೆಂಟ್ ಹೇಳ್ತೇನೆ. ಇದು ಬ್ಯಾಂಕ್ ಫ್ರಾಡ್ ಯೂನಿಯನ್ ಬ್ಯಾಂಕ್‌ನವ್ರು ಮಾಡಿದ ಕೆಲಸ. ರಾಜಕೀಯಕ್ಕೋಸ್ಕರ ನನ್ನ ಮೇಲೆ ಆರೋಪ ಮಾಡಿದ್ರು. ಜಸ್ಟ್ ಕ್ಲಾರಿಫಿಕೇಷನ್ ಅಷ್ಟೇ, ಕೋರ್ಟ್‌ನಲ್ಲಿ ಕೇಸ್ ನಡೀತಿದೆ ಎಂದು ತಿಳಿಸಿದರು.
ನನ್ನ ರಾಜೀನಾಮೆ ಪಕ್ಷಕ್ಕೋಸ್ಕರ. ನಾನೇ ಸ್ವಹಿತಾಸಕ್ತಿಯಿಂದ ಕೊಟ್ಟಿರೋದು ಅಷ್ಟೇ. ಇದರಲ್ಲಿ ಬೇರೆ ಏನಿಲ್ಲ. ಪಾದಯಾತ್ರೆ ಮಾಡ್ತಿದ್ದಾರೆ, ಮಾಡಲಿ ಏನೂ ಯೂಸ್ ಇಲ್ಲ. ಅವರ ಪಾದಯಾತ್ರೆಯಿಂದ ನಾವು ಒಗ್ಗಟ್ಟಾಗಿದ್ದೇವೆ. ಆದರೆ, ಅವರ ಒಗ್ಗಟ್ಟು ಹೊಡೆದಿದೆ. ಮೊದಲು ನೋಡಿ ಎಲ್ಲಾ ನಾಯಕರು ಬಂದ್ರು. ದಿನ ದಿನ ವಿಜಯೇಂದ್ರ ಬಿಟ್ಟು, ಎಲ್ಲಾ ಕಾಲು ನೋವು, ಅದು ಇದು ಅಂತ ಜಾಗ ಖಾಲಿ ಮಾಡಿದ್ರು. ಏನ್ ಬೇಕಾದ್ರು ಮಾಡಲು ನಮ್ಮ ಬಳ್ಳಾರಿಯಲ್ಲಿ ಕಾಂಗ್ರೆಸ್ ಗಟ್ಟಿ ಇದೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: 2028ಕ್ಕೆ ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ, ನಾನು ಅಲ್ಲೇ ನಿಲ್ತೀನಿ: ಸವಾಲು ಸ್ವೀಕರಿಸಿದ ಶ್ರೀರಾಮುಲು
ಜನಾರ್ದನ ರೆಡ್ಡಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಯಾಕೆ ಈ ರೀತಿ ಮಾಡ್ತಿದ್ದಾರೆ ಅಂತ ಗೊತ್ತಾಗಿಲ್ಲ. ಬೆಳೆಸಿದ್ದಾರೆ, ಇಲ್ಲ ಅಂತ ಹೇಳಿಲ್ಲ. ಹಾಗಂತ ಏನ್ ಹೇಳಿದ್ರೂ ಕೇಳ್ಬೇಕಾ? ನಮಗೆ ಆಶ್ವರ್ಯವಾಗ್ತಿದೆ. ಯಾಕೆ ನಮ್ಮ ಮೇಲೆ ಈ ರೀತಿ ಮಾಡ್ತಿದ್ದಾರೆ ಅಂತ. ನನಗೆ ಸಚಿವ ಸ್ಥಾನ ಕೊಟ್ಟಿದ್ದು ಅವರಿಗೆ ತಡೆಯಲಾಗಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
