ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ (Pavithra Gowda) ಗುಡ್ ನ್ಯೂಸ್ ಸಿಕ್ಕಿದೆ. ಸದ್ಯ ಆರೋಪಿಯನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಲು ಕೋರ್ಟ್ ಅನುಮತಿ ನೀಡಿದೆ.
ಆರೋಪಿ ಪವಿತ್ರಾ ಗೌಡ ಅವರು ಜೈಲಿನಲ್ಲಿ ತಮ್ಮ ಬ್ಯಾರಕ್ ಬದಲಾಯಿಸುವಂತೆ ಬೆಂಗಳೂರಿನ 59ನೇ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಸ್ತುತ ಇರುವ ಬ್ಯಾರಕ್‌ನಲ್ಲಿ 20 ರಿಂದ 30 ಜನ ಕೈದಿಗಳಿದ್ದು, ಕೇವಲ ಎರಡು ಶೌಚಾಲಯಗಳಿವೆ (ಒಂದು ಕೆಟ್ಟಿದೆ). ಇದರಿಂದ ಆರೋಗ್ಯದಲ್ಲಿ ಸೋಂಕು ಮತ್ತು ಅಲರ್ಜಿ ಉಂಟಾಗಿದೆ ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನಿಧನ
ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ಆರೋಪಿಯ ಆರೋಗ್ಯದ ಹಿತದೃಷ್ಟಿಯಿಂದ ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.
ಷರತ್ತು ವಿಧಿಸಿರುವ 59 ನೇ ಸಿಸಿಹೆಚ್ ಕೋರ್ಟ್, ಜೈಲು ಮ್ಯಾನ್ಯುಯಲ್ ಪ್ರಕಾರ ಮುಂದುವರೆಯಲು ಸೂಚಿಸಿದೆ. ಇದನ್ನೂ ಓದಿ: ಸಿನಿಮಾ ಆಯ್ತು ಮುಳ್ಳಿನ ಗುಲಾಬಿ ಕಾದಂಬರಿ
