ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (Sanjay Singh) ನಿಧನರಾಗಿದ್ದಾರೆ.
7-8 ತಿಂಗಳ ಹಿಂದೆಯೇ ಅವರು ಮೃತರಾಗಿದ್ದು, ವಿಷಯ ಮಾತ್ರ ತಡವಾಗಿ ಬೆಳಕಿಗೆ ಬಂದಿದೆ. ಹಲವಾರು ವರ್ಷಗಳಿಂದ ಅನಾರೋಗ್ಯ ತುತ್ತಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ರಾಜಸ್ಥಾನದಲ್ಲಿ ಮೃತಪಟ್ಟಿದ್ದಾರೆ.

ವಿಚ್ಛೇದನದ ನಂತರ ಅವರು ಕುಡಿತಕ್ಕೆ ದಾಸನಾಗಿದ್ದರು. ಈ ಕುಡಿತವೇ ಅವರನ್ನು ಬಲಿ ತಗೆದುಕೊಂಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ (Pavithra Gowda) ಬಂಧನವಾದಾಗ, ಸಂಜಯ್ ಸಿಂಗ್ ಬೆಂಗಳೂರಿಗೆ ಬಂದಿದ್ದರು. ಪವಿತ್ರಾ ಗೌಡ ಜೊತೆಗಿನ ಸಂಬಂಧವನ್ನು ʻಪಬ್ಲಿಕ್ ಟಿವಿʼ ಜೊತೆ ಹಂಚಿಕೊಂಡಿದ್ದರು. ಬೆಂಗಳೂರಿನಿಂದ ತೆರಳಿದ ಕೆಲವೇ ತಿಂಗಳಲ್ಲಿ ಅವರು ನಿಧನರಾಗಿದ್ದಾರಂತೆ.

ಸಂಜಯ್ ಸಿಂಗ್ ಈ ಹಿಂದೆ ಮಾಧ್ಯಮಕ್ಕೆ ನೀಡಿದ್ದ ಮಾಹಿತಿ ಪ್ರಕಾರ, 2011 ರಲ್ಲೇ ಪವಿತ್ರಾ ಜೊತೆ ಅವರ ವಿಚ್ಛೇದನ ಆಗಿತ್ತು. 2007 ಹಾಗೂ 2008ರ ಆಸುಪಾಸಿನ ವೇಳೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಸಂಜಯ್ ಸಿಂಗ್ ಪವಿತ್ರಾ ಗೌಡ ಜೋಡಿಗೆ ಓರ್ವ ಮಗಳಿದ್ದಾರೆ. ವಿಚ್ಛೇದನದ ಬಳಿಕ ಮಾಜಿ ಪತಿಯ ಸಂಪರ್ಕ ಸಂಪೂರ್ಣ ಕಡಿದುಕೊಂಡಿದ್ದ ಪವಿತ್ರಾ ಗೌಡ ಇದೀಗ ಕೊಲೆ ಕೇಸ್ ಆರೋಪಿಯಾಗಿ ಜೈಲಲ್ಲಿದ್ದಾರೆ.

