ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ನ ಎರಡನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಶುಕ್ರವಾರ (ಸೆ.18) ಪ್ರಕಟಿಸಿದ್ದು, ಶನಿವಾರದಿಂದ (ಸೆ.19) ಪ್ರಕ್ರಿಯೆ ಆರಂಭವಾಗಲಿದೆ.
ಮೊದಲ ಸುತ್ತಿನಲ್ಲಿ ಚಾಯ್ಸ್-3 ಆಯ್ಕೆ ಮಾಡಿರುವ ಹಾಗೂ ಇತರ ಚಾಯ್ಸ್ ದಾಖಲಿಸಿರುವ ಅಭ್ಯರ್ಥಿಗಳು ಎರಡನೇ ಸುತ್ತಿಗೆ ಅರ್ಹತೆ ಪಡೆಯಲು ಸೆ.19ರಿಂದ 22ರವರೆಗೆ 1,00,000 ರೂ. (SC/ST ಅಭ್ಯರ್ಥಿಗಳು 50,000 ರೂ.) ಕಾಷನ್ ಡೆಪಾಸಿಟ್ ಪಾವತಿಸಬೇಕು. ಅದರ ಬಳಿಕವೇ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ. ಇದನ್ನೂ ಓದಿ: ದಾಖಲೆ ಇಲ್ಲದ ಗ್ರಾಮಠಾಣಾ ಸ್ವತ್ತಿಗೆ ನ.1ರಿಂದ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ
ಮೊದಲ ಸುತ್ತಿನಲ್ಲಿ ಚಾಯ್ಸ್-2 ಆಯ್ಕೆ ಮಾಡಿ, ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಕಾಷನ್ ಡೆಪಾಸಿಟ್ ಮಾಡುವ ಅಗತ್ಯ ಇರುವುದಿಲ್ಲ. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಅಭ್ಯರ್ಥಿಯು ಪಾವತಿಸಿರುವ ಕಾಷನ್ ಡೆಪಾಸಿಟ್ ಅನ್ನು ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.
ಸೆ.19ರಂದು ಬೆಳಿಗ್ಗೆ 11ಕ್ಕೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ. ಸೆ.19ರಿಂದ 23ರವರೆಗೆ ಆಪ್ಷನ್ಸ್ ಬದಲಿಸಲು/ಅಳಿಸಲು/ಮಾರ್ಪಡಿಸಲು ಅವಕಾಶ ನೀಡಲಾಗಿದೆ. ಸೆ.23ರಂದು ಸಂಜೆ 4ಕ್ಕೆ ತಾತ್ಕಾಲಿಕ ಹಾಗೂ ಸೆ.24ರಂದು ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೆ.24ರಿಂದ 28ರವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕು. ಹಾಗೆಯೇ ಇದೇ ಅವಧಿಯಲ್ಲಿ ಮೂಲ ದಾಖಲೆಗಳನ್ನು ಕೆಇಎ ಕಚೇರಿಯಲ್ಲಿ ಖುದ್ದು ಸಲ್ಲಿಸಬೇಕು. ಬಳಿಕ ಅಭ್ಯರ್ಥಿಗಳು ಸೆ.29ರವರೆಗೆ ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಲ್ಲಿ ಹಾಜರಾಗಬೇಕು ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:ಹಿರಿಯ ನಟ ಅನಂತ್ ನಾಗ್ ಭೇಟಿಯಾದ ಕೇಂದ್ರ ಸಚಿವ ಸೋಮಣ್ಣ

