– ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಅಭಿನಂದನೆ
ಬೆಂಗಳೂರು: ಇತ್ತೀಚಿಗೆ ದಾದಾ ಸಾಹೇಬ್ ಫಾಲ್ಕೆ (Dadasaheb Phalke) ಪ್ರಶಸ್ತಿಗೆ ಭಾಜನರಾದ ಹಿರಿಯ ನಟ ಅನಂತ್ ನಾಗ್ (Ananth Nag) ಅವರನ್ನು ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಅವರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಅನಂತ್ ನಾಗ್‌ರವರ ನಿವಾಸಕ್ಕೆ ತೆರಳಿ ಭೇಟಿಯಾದ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ:ಆಸ್ಕರ್ 2027ರ ರೇಸ್‌ಗೆ ಮರಾಠಿಯ ʻಗೊಂಧಳ್ʼ ಸಿನಿಮಾ ಆಯ್ಕೆ
ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಚಿತ್ರರಂಗದ ಹೆಮ್ಮೆಯ ನಟ ಶ್ರೀ ಅನಂತ್ ನಾಗ್ ಅವರನ್ನು ಭೇಟಿಯಾಗಿ, ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಭಾರತೀಯ ಚಿತ್ರರಂಗ ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ಕಳೆದ 5 ದಶಕಗಳ ಕಾಲ ಅವರು ಸಲ್ಲಿಸಿರುವ ಸೇವೆ ಅಪೂರ್ವವಾದುದು. ಡಾ.… pic.twitter.com/tdsbko1G7J
— V. Somanna (@VSOMANNA_BJP) September 18, 2026
ಈ ಕುರಿತು ಸೋಮಣ್ಣ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಚಿತ್ರರಂಗದ ಹೆಮ್ಮೆಯ ನಟ ಅನಂತ್ ನಾಗ್ ಅವರನ್ನು ಭೇಟಿಯಾಗಿ, ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ಭಾರತೀಯ ಚಿತ್ರರಂಗ ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ಕಳೆದ 5 ದಶಕಗಳ ಕಾಲ ಅವರು ಸಲ್ಲಿಸಿರುವ ಸೇವೆ ಅಪೂರ್ವವಾದುದು. ಡಾ. ರಾಜ್ ಕುಮಾರ್ ಅವರ ನಂತರ ಮತ್ತೊಬ್ಬ ಕನ್ನಡಿಗರಿಗೆ ಪ್ರಶಸ್ತಿ ಅರಸಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

