ಬಿಗ್ ಬಾಸ್ ಸೀಸನ್ 13ರ ಮೊದಲ ಕ್ಯಾಪ್ಟನ್ ಆಗಿ ಸಂಗೀತಾ ಭಟ್ ಕಿರೀಟ ಧರಿಸಿದ್ದಾರೆ. ಬಿಗ್ ಬಾಸ್ ನೀಡಿದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಸಿಯಾ ವಿರುದ್ಧ ಸೆಣಸಿ ಸಂಗೀತ ಗೆದ್ದು ಪಟ್ಟ ಅಲಂಕರಿಸಿದ್ದಾರೆ.
ದೊಡ್ಮನೆಗೆ ಮೊದಲ ಪೈಲಟ್ ಆಗಿ ಆಯ್ಕೆಯಾಗಿದ್ದ ಸಂಗೀತಾ, ಕೋ-ಪೈಲಟ್ ಆಗಿ ಆಸಿಯಾ ಅವರನ್ನು ಆಯ್ಕೆ ಮಾಡಿದ್ದರು. ಕ್ಯಾಪ್ಟನ್ಸಿಗಾಗಿ ಇಬ್ಬರ ನಡುವೆ ಪೈಪೋಟಿ ನಡೆದಿತ್ತು. ಇಂದು ನಡೆದ ಸ್ಪರ್ಧೆಯಲ್ಲಿ ಸಂಗೀತಾ ಜಯಗಳಿಸಿ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದಾರೆ.
ಸ್ಪರ್ಧೆ ಏನಿತ್ತು?
ಸಹಾಯಕರು ಏಣಿಗೆ ಕಟ್ಟಿದ ಹಗ್ಗದಿಂದ ಅಭ್ಯರ್ಥಿ (ಸಂಗೀತಾ, ಆಸಿಯಾ) ಬೀಳದಂತೆ ಸಂಭಾಳಿಸಬೇಕು. ಅಂತಿಮವಾಗಿ ಸ್ಥಾನದಲ್ಲಿರುವ ಬಿಲ್ಲೆಗಳ ಚೀಲವನ್ನು ಪಡೆದು ಅಭ್ಯರ್ಥಿಗಳು ಮೂಲ ಸ್ಥಾನಕ್ಕೆ ಮರಳಬೇಕು. ಎಲ್ಲಾ ಬಿಲ್ಲೆಗಳನ್ನು ಸಾಲಾಗಿ ಜೋಡಿಸಿ ಎದುರಾಳಿ ಅಭ್ಯರ್ಥಿ ಫೋಟೊ ಇರುವ ಬಿಲ್ಲೆಗಳು ಈಜುಕೊಳಕ್ಕೆ ಬೀಳಿಸುವವರು ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಾರೆ.
ಬಿಗ್ ಬಾಸ್ ನೀಡಿದ ಸ್ಪರ್ಧೆಯಲ್ಲಿ ಸಂಗೀತಾ ಭಟ್ ಅವರು ಜಯ ಗಳಿಸುತ್ತಾರೆ. ಆ ಮೂಲಕ ಈ ಸೀಸನ್‌ನ ಮೊದಲ ಕ್ಯಾಪ್ಟನ್ ಆಗಿದ್ದಾರೆ.

