ಚಿತ್ರದುರ್ಗ: ಮೊಳಕಾಲ್ಮೂರು (Molakalmuru) ಕ್ಷೇತ್ರವನ್ನು ಪಕ್ಕದ ಆಂಧ್ರಪ್ರದೇಶಕ್ಕೆ (Andhra Pradesh) ಅಥವಾ ಚಳ್ಳಕೆರೆಗೆ (Challakere) ಸೇರಿಸಲಿ ಎಂದು ಶಾಸಕ ಎನ್‌ವೈ ಗೋಪಾಲಕೃಷ್ಣ (NY Gopalakrishna) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ಕೈತಪ್ಪಿದ ಹಿನ್ನೆಲೆಯಲ್ಲಿ ಏಳು ಬಾರಿ ಗೆದ್ದರೂ, ಹಿರಿತನಕ್ಕೆ ಮಣೆ ಹಾಕಲಿಲ್ಲವೆಂದು ಬಹಿರಂಗವಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್‌ವೈ ಗೋಪಾಲಕೃಷ್ಣ ಅವರು, ಇತ್ತೀಚೆಗೆ ಸಚಿವ ರಘುಮೂರ್ತಿ ಮೊಳಕಾಲ್ಮೂರು ಕ್ಷೇತ್ರದ ಬರ ಪರಿಶೀಲನೆಗೆ ಬಂದಾಗ ಸಂಪೂರ್ಣ ಶಾಂತವಾಗಿದ್ದರು. ಮುಂಬರುವ ಚುನಾವಣೆಗೆ ಮೊಳಕಾಲ್ಮೂರು ಕ್ಷೇತ್ರದಿಂದಲೇ ಸಚಿವರಾದ ರಘುಮೂರ್ತಿ ಶಾಸಕರಾಗಲಿ ಎಂದಿದ್ದು, ಸಿಎಂ ಡಿಕೆಶಿ ಪರ ಬ್ಯಾಟ್ ಬೀಸಿದ್ದರು. ಆದರೆ ಈಗ ಧಿಡೀರ್ ಅಂತ ಮತ್ತೆ, ಶಾಸಕ ಎನ್‌ವೈ ಗೋಪಾಲಕೃಷ್ಣ ಯೂಟರ್ನ್ ಹೊಡೆದಿದ್ದಾರೆ. ಇದನ್ನೂ ಓದಿ: ರೈಲಿನಲ್ಲೇ ಭಾರೀ ಹೈಡ್ರಾಮಾ, RPF ಸಿಬ್ಬಂದಿ ಬಟ್ಟೆ ಬಿಚ್ಚಿ, ರೇಜರ್‌ನಿಂದ ಹಲ್ಲೆ; ನಟಿ ಅಂತರಾ ಬ್ಯಾನರ್ಜಿ ಅರೆಸ್ಟ್
ಮೊಳಕಾಲ್ಮೂರಿನ ಅಂಬೇಡ್ಕರ್ ಭವನ ಸ್ಥಳ ಪರಿಶೀಲನೆ ವೇಳೆ, ಮತ್ತೆ ಮಂತ್ರಿಗಿರಿ ಕೈತಪ್ಪಿದ ಹಿನ್ನೆಲೆ ಮನೆಮಾಡಿದ್ದ ಆಕ್ರೋಶದ ಕಟ್ಟೆ ಒಡೆದಿದೆ. ಪರಿಣಾಮ, ಈ ಮೊಳಕಾಲ್ಮೂರು ಕ್ಷೇತ್ರ ಯಾವುದೋ ಮೂಲೆಯಲ್ಲಿದೆ. ಹೀಗಾಗಿ ದೊಡ್ಡ ದೊಡ್ಡವರಿಗೆ ಮೊಳಕಾಲ್ಮೂರು ಕಾಣೋದೆ ಇಲ್ಲ. ಈ ಮೊಳಕಾಲ್ಮೂರು ಶಾಸಕರಿಗೆ ಗೌರವ ಇರೋದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೊಳಕಾಲ್ಮೂರು ಹಣೆಬರಹ ಎಲ್ಲಿತ್ತೋ ಅಲ್ಲೇ ಇದೆ. ನನ್ನೂ ಸೇರಿಕೊಂಡೇ ಅಲ್ಲೇ ಇದ್ದೇವೆಂದು ತೀವ್ರ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಬೇಟೆಗೆ ಬಂದವರು ವೀರಪ್ಪನ್ ಮಟ್ಟದವರಾ?- ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ
ಶಕ್ತಿಯಿದ್ದರೆ ಗುದ್ದಬೇಕು, ಇಲ್ಲ ಹೊಂದಿಕೊಳ್ಳಬೇಕು. ನಾವು ಹೊಂದಿಕೊಂಡು ಹೋಗಬೇಕಾಗುತ್ತದೆ. ಶಕ್ತಿ ಸಾಲದು, ಗುದ್ದಲು ಹೋದರೆ ಕೈ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡೋಣ. ನೂತನ ಮಂತ್ರಿಯಾದ ರಘುಮೂರ್ತಿಗೆ ಹೆಚ್ಚಿನ ಅನುದಾನ ನೀಡಲು ಹೇಳಿದ್ದೇನೆಂದು ಸ್ವಯಂ ಅವರೇ ಸಮಾಧಾನದ ಮಾತುಗಳನ್ನಾಡುವ ಮೂಲಕ ಅಸಹಾಯಕತೆಯನ್ನು ಹೊರಹಾಕಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಹೋಟೆಲ್ ಬಳಿಕ ʻಆಪರೇಷನ್ ಡರ್ಟಿ ಪಿಜಿʼ – ನಾಳೆಯಿಂದಲೇ ಜಿಬಿಎ ವ್ಯಾಪ್ತಿಯ ಪಿಜಿ, ಹಾಸ್ಟೆಲ್‌ಗಳ ಪರಿಶೀಲನೆ ಶುರು
