ಕನ್ನಡ ಕಿರುತೆರೆಯ ಬಹುನಿರೀಕ್ಷಿತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್ ಕನ್ನಡ ಸೀಸನ್ 13’ರ (Bigg Boss 13) ಗ್ರ್ಯಾಂಡ್ ಓಪನಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಕಿಚ್ಚ ಸುದೀಪ್ ಸಾರಥ್ಯದ ಈ ಶೋನಲ್ಲಿ ಈ ಬಾರಿ ಯಾರೆಲ್ಲಾ ದೊಡ್ಮನೆಗೆ ಕಾಲಿಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಈ ಬಾರಿ ಒಟ್ಟು 18 ಸ್ಪರ್ಧಿಗಳು ಫೈನಲ್ ಆಗಿದ್ದಾರೆ. ಸಿನಿಮಾ ನಟರು, ಕಿರುತೆರೆ ಕಲಾವಿದರು, ಕಾಮಿಡಿ ಕಲಾವಿದರು, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಸೇರಿದಂತೆ ಹಲವು ಕ್ಷೇತ್ರಗಳ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.

ಪ್ರಯಾಣದ ಥೀಮ್‌ನಲ್ಲಿ ಹೊಸ ಬಿಗ್‌ಬಾಸ್ ಮನೆ
‘ಬಿಗ್‌ಬಾಸ್ ಕನ್ನಡ ಸೀಸನ್ 13’ರ ಅದ್ಧೂರಿ ಲಾಂಚ್‌ಗಾಗಿ ಬಿಡದಿ ಬಳಿಯಿರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಬಳಿ ಹೊಸ ಬಿಗ್‌ಬಾಸ್ ಮನೆಯನ್ನ ನಿರ್ಮಿಸಲಾಗಿದೆ. ಈ ಬಾರಿ ಮನೆಯ ವಿನ್ಯಾಸದಲ್ಲಿ ಪ್ರಯಾಣದ ಥೀಮ್ ಪ್ರಮುಖ ಆಕರ್ಷಣೆಯಾಗಲಿದೆ ಎನ್ನಲಾಗುತ್ತಿದೆ. ಈ ನಡುವೆ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ತಂಡವನ್ನು ಭೇಟಿ ಮಾಡಿದ್ದು, ಹೊಸ ಫೋಟೋಶೂಟ್‌ಗಳನ್ನೂ ಆರಂಭಿಸಿದ್ದಾರೆ.
ದೊಡ್ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳು ಯಾರು?
ಸದ್ಯ ಮೂಲಗಳ ಪ್ರಕಾರ, ಬಿಗ್‌ಬಾಸ್ ಕನ್ನಡ ಸೀಸನ್ 13ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಈ ಕೆಳಗಿನ ಸ್ಪರ್ಧಿಗಳ ಹೆಸರು ಕೇಳಿಬರುತ್ತಿವೆ
1. ಸೋನಿ ಮುಲೆವಾ
‘ಬೆಂಗಳೂರು ಬಾಯ್ಸ್’ ಸಿನಿಮಾದಲ್ಲಿ ನಟಿಸಿರುವ ಸೋನಿ ಮುಲೆವಾ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ನಟನೆಯ ಜೊತೆಗೆ ಅವರು ಇನ್‌ಸ್ಟಾಗ್ರಾಂ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ.

2. ಅನನ್ಯಾ ಅಮರ್
ನಟಿ ಹಾಗೂ ಗಾಯಕಿ ಅಂಕಿತಾ ಅಮರ್ ಅವರ ಸಹೋದರಿ ಅನನ್ಯಾ ಅಮರ್ ಈ ಬಾರಿ ಬಿಗ್‌ಬಾಸ್ ಮನೆಗೆ ಕಾಲಿಡುತ್ತಿದ್ದಾರೆ. ಹಾಡುಗಾರಿಕೆ ಮತ್ತು ನೃತ್ಯದಲ್ಲೂ ಅವರು ಪ್ರತಿಭೆ ಹೊಂದಿದ್ದಾರೆ.
3. ಸೌಂದರ್ಯಾ ಶೆಟ್ಟಿ
ಮಂಗಳೂರು ಮೂಲದ ನಟಿ ಸೌಂದರ್ಯಾ ಶೆಟ್ಟಿ ಅವರ ಹೆಸರು ಕೂಡ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ. ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಸ್ಪ್ಲಿಟ್ಸ್‌ವಿಲ್ಲಾ’ದಲ್ಲೂ ಅವರು ಕಾಣಿಸಿಕೊಂಡಿದ್ದರು.
4. ಆಸಿಯಾ ಫಿರ್ದೋಸ್
‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯ ಮೂಲಕ ಜನಪ್ರಿಯರಾಗಿರುವ ಆಸಿಯಾ ಫಿರ್ದೋಸ್ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದಾರೆ. ‘ಕನ್ಯಾಕುಮಾರಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ಅವರು ನಟಿಸಿದ್ದಾರೆ.

5. ಸಂಗೀತಾ ಭಟ್
ಕನ್ನಡ ಚಿತ್ರರಂಗದ ಪರಿಚಿತ ನಟಿ ಸಂಗೀತಾ ಭಟ್ ಅವರ ಹೆಸರೂ ಈ ಬಾರಿ ಬಿಗ್‌ಬಾಸ್‌ಗಾಗಿ ಕೇಳಿಬರುತ್ತಿದೆ. ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ‘ಎರಡನೇ ಸಲ’, ‘ದಯವಿಟ್ಟು ಗಮನಿಸಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
6. ಆಸಿಯಾ ಬೇಗಂ
‘ಕ್ವಾಟ್ಲೆ ಕಿಚನ್’, ‘ಭರ್ಜರಿ ಬ್ಯಾಚ್ಯುಲರ್’ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಆಸಿಯಾ ಬೇಗಂ ಕೂಡ ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.
7. ಡ್ರ್ಯಾಗನ್ ಮಂಜು
ತಮ್ಮ ದೈತ್ಯ ದೇಹ ಮತ್ತು ಫಿಟ್‌ನೆಸ್‌ನಿಂದಲೇ ಗಮನ ಸೆಳೆದಿರುವ ಡ್ರ್ಯಾಗನ್ ಮಂಜು ಈ ಬಾರಿ ಬಿಗ್‌ಬಾಸ್ ಮನೆ ಎಂಟ್ರಿ ಕೊಡ್ತಿದ್ದಾರೆ. ದುನಿಯಾ ವಿಜಯ್ ಅಭಿನಯದ ‘ಭೀಮಾ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
8. ಜಗ್ಗ ಮಮ್ಮಿ
‘ಲವ್ ಮಾಕ್ಟೇಲ್ 2’ ಸಿನಿಮಾದ ಹಾಸ್ಯಪಾತ್ರದ ಮೂಲಕ ಗುರುತಿಸಿಕೊಂಡಿರುವ ಜಗ್ಗ ಮಮ್ಮಿ ಅವರ ಹೆಸರು ಕೂಡ ಸ್ಪರ್ಧಿಗಳ ಪಟ್ಟಿಯಲ್ಲಿದೆ. ಹಾಸ್ಯಕಲಾವಿದರಾಗಿರುವ ಅವರು ದೊಡ್ಮನೆಯಲ್ಲಿ ನಗುವಿನ ಅಲೆ ಎಬ್ಬಿಸುತ್ತಾರಾ ಎಂಬ ಕುತೂಹಲ ಮೂಡಿದೆ.

9. ಸೂರಜ್
‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಸೂರಜ್ ಕೂಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.
10. ತಾಂಡವ್ ರಾಮ್
ಕಿರುತೆರೆಯ ಜನಪ್ರಿಯ ನಟ ತಾಂಡವ್ ರಾಮ್ ಅವರ ಹೆಸರೂ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ‘ಜೋಡಿ ಹಕ್ಕಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಹಾಗೂ ‘ಕ್ವಾಟ್ಲೆ ಕಿಚನ್’ನಂತಹ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
11. ರೈತ ಸಜೀವ್
ಕೋಲಾರ ಜಿಲ್ಲೆಯ ರೈತ ಸಜೀವ್ ಕೂಡ ಈ ಬಾರಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ. ಕೃಷಿಯ ಜೊತೆಗೆ ಹೂವಿನ ವ್ಯಾಪಾರ ಹಾಗೂ ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಅವರು ಐಷಾರಾಮಿ ಜೀವನಶೈಲಿಯಿಂದ ಗಮನ ಸೆಳೆದಿದ್ದಾರೆ. ಹಯಾಬುಸಾ ಬೈಕ್, ಪೋರ್ಷೆ ಮತ್ತು ಲ್ಯಾಂಬೋರ್ಗಿನಿಯಂತಹ ದುಬಾರಿ ವಾಹನಗಳನ್ನು ಹೊಂದಿರುವ ಸಜೀವ್, ವಾಹನಗಳು ಮತ್ತು ಬಂಗಾರದ ಆಭರಣಗಳ ಮೇಲಿನ ತಮ್ಮ ಆಸಕ್ತಿಯಿಂದಲೂ ಗುರುತಿಸಿಕೊಂಡಿದ್ದಾರೆ.
ಇನ್ನೂ 7 ಹೆಸರುಗಳು ಯಾರು?
ಒಟ್ಟು 18 ಸ್ಪರ್ಧಿಗಳು ಫೈನಲ್ ಆಗಿದ್ದಾರೆ ಎನ್ನಲಾಗುತ್ತಿದ್ದರೂ, ಉಳಿದ ಸ್ಪರ್ಧಿಗಳ ಹೆಸರುಗಳು ಇನ್ನೂ ಸಂಪೂರ್ಣವಾಗಿ ಬಹಿರಂಗವಾಗಿಲ್ಲ. ಸಿನಿಮಾ, ಕಿರುತೆರೆ, ಕಾಮಿಡಿ ಮತ್ತು ಸೋಷಿಯಲ್ ಮೀಡಿಯಾ ಕ್ಷೇತ್ರದಿಂದ ಮತ್ತಷ್ಟು ಜನರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ.
