– ಬರಿ ಟೀಕೆ ಮಾಡೋದಕ್ಕೆ ಒಬ್ಬರಿಗೆ ಕೇಂದ್ರ ಸಚಿವ ಸ್ಥಾನ ಕೊಟ್ಟಿದ್ದಾರೆ: ಹೆಚ್‌ಡಿಕೆ ವಿರುದ್ಧ ನರೇಂದ್ರಸ್ವಾಮಿ ಗುಡುಗು
– ಕುಮಾರಸ್ವಾಮಿ ವಿರುದ್ಧ ಕುಸ್ತಿ ಗೆದ್ದ ಒಬ್ಬನೇ ಪೈಲ್ವಾನ್ ಡಿಕೆಶಿ ಎಂದ ಸಚಿವ
ಮಂಡ್ಯ: ರೈತರು ಈ ವರ್ಷ ಅರೆ ಬೆಳೆ ಬೆಳೆಯುವ ಕೆಲಸ ಮಾಡಬೇಕು. ಅನಿವಾರ್ಯ ಪರಿಸ್ಥಿತಿ ಇದೆ, ದಯವಿಟ್ಟು ರೈತರು ಸಹಕರಿಸಿ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ (P.M.Narendraswamy) ಮನವಿ ಮಾಡಿದರು.
ಮಂಡ್ಯದ ಹಲಗೂರಿನಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 20% ಬಿತ್ತನೆ ಬಿಜ ಅಷ್ಟೆ ರೈತರು ತೆಗೆದುಕೊಂಡಿರೋದು. ಇಷ್ಟೊತ್ತಿಗೆ ಶೇ.90 ರಷ್ಟು ಬಿತ್ತನೆಯಾಗಬೇಕಿತ್ತು. 20% ಬಿತ್ತನೆ ಬೀಜ ತೆಗೆದುಕೊಂಡರು. ಅದರಲ್ಲೂ ಸಂಪೂರ್ಣ ಬಿತ್ತನೆಯಾಗಿಲ್ಲ. ರೈತರ ಬಗ್ಗೆ ಸದನದಲ್ಲಿ ಚರ್ಚೆ ಮಾಡ್ತೇವೆ. ವಾಸ್ತವದ ಚಿತ್ರಣ ಇಡುತ್ತೇವೆ. ಜನರನ್ನು ಸಂರಕ್ಷಣೆ ಮಾಡೋದರಲ್ಲಿ ಸರ್ಕಾರ ಬದ್ಧ. ಮಂಡ್ಯ, ರಾಜ್ಯದಲ್ಲಿ ಬರದ ಕೆಟ್ಟ ಪರಿಸ್ಥಿತಿ ಇದೆ. ಭಗವಂತನ ಬಿಟ್ಟರೆ ಬೇರೆ ದಾರಿ ಕಾಣುತ್ತಿಲ್ಲ. ಆಗಸದಲ್ಲಿ ಮಳೆಯ ಮೋಡಗಳೇ ಕಾಣುತ್ತಿಲ್ಲ. ಸ್ಯಾಟಲೈಟ್ ಚಿತ್ರಣ ನೋಡಿದರೆ ಗಾಬರಿಯಾಗುತ್ತೆ. ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕರ್ನಾಟಕ ಮಾತ್ರವಲ್ಲ, ಪ್ರಪಂಚದಲ್ಲೇ ಇಂತಹ ವಾತಾವರಣ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗಿ: ಡಿ.ಕೆ ಶಿವಕುಮಾರ್
ನಮ್ಮ ನೀರು ಬಿಟ್ಟು ಬಿಟ್ಟಿದ್ದಾರೆ ಅಂತ ಹೋರಾಟಗಳು ನಡೆಯುತ್ತಿವೆ. ಸಿಡಬ್ಯುಎಂಎ, ಸಿಡಬ್ಯುಆರ್‌ಸಿ ಸುಪ್ರೀಂ ಕೋರ್ಟ್ ಮುಂದೆ ವಾಸ್ತವ ಸ್ಥಿತಿ ಇಟ್ಟಿದ್ದೇವೆ. ಸರ್ಕಾರ ನಿಭಾಯಿಸುವ ಕೆಲಸ ಮಾಡ್ತಿದೆ. ಮಂಡ್ಯ ಜಿಲ್ಲೆ ಕೃಷಿ ಪ್ರದೇಶ. ಬೆಳೆ ಇಲ್ಲದೆ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಜನ-ಜಾನುವಾರುಗಳ ರಕ್ಷಣೆ ಮಾಡಲು ನಾವು ಸಿದ್ಧ ಇದ್ದೇವೆ. ರಾಜ್ಯದಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ. ಇದೇ ಪರಿಸ್ಥಿತಿ ಒಂದು ತಿಂಗಳು ಮುಂದುವರಿದರೆ ಕಷ್ಟ. ಭಗವಂತನ ಬಿಟ್ಟರೆ ಬೇರೆ ದಾರಿ ಇಲ್ಲ. ಅಧಿಕಾರಿಗಳ ತಂಡಗಳನ್ನು ರೈತರ ಜಮೀನಿಗೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಶೋಚನೀಯ ಪರಿಸ್ಥಿತಿಯಲ್ಲಿ ರಾಜ್ಯ ಇದೆ. ರೈತರು ಈ ವರ್ಷ ಅರೆ ಬೆಳೆ ಬೆಳೆಯುವ ಕೆಲಸ ಮಾಡಬೇಕು. ಅನಿವಾರ್ಯ ಪರಿಸ್ಥಿತಿ ಇದೆ. ದಯವಿಟ್ಟು ರೈತರು ಸಹಕರಿಸಿ. ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಕೂಡ ಎದುರಾಗುತ್ತದೆ. ಮೊದಲು ಕುಡಿಯುವ ನೀರಿಗೆ ಆದ್ಯತೆ ಎಂದು ತಿಳಿಸಿದರು.
ಬಿಜೆಪಿಯಿಂದ ಬಳ್ಳಾರಿ ಪಾದಯಾತ್ರೆ ಬಗ್ಗೆ ಮಾತನಾಡಿ, ಬಿಜೆಪಿ ವಿರುದ್ಧ ರಾಷ್ಟ್ರದ ಯುವ ಜನತೆ ಎದ್ದು ನಿಂತಿದೆ. ಯಾವ ಉದ್ದೇಶ ಇಟ್ಕೊಂಡು ಪಾದಯಾತ್ರೆ? ನಾವು ಹಿಂದೆ ಗಣಿ ಲೂಟಿ ಬಗ್ಗೆ ಹೋರಾಟ ಮಾಡಿದ್ವಿ. ಇಷ್ಟೊಂದು ಪ್ರತಿಭಟನೆ ಮಾಡೋ ಅವಶ್ಯಕತೆ ಇಲ್ಲ. ದಾಖಲೆ ಇದ್ರೆ ಸದನದಲ್ಲೇ ನಮ್ಮನ್ನು ಜಾಡಿಸಬಹುದಿತ್ತು. ಜನರೇ ನೋಡ್ತಿದ್ರು, ನಿಮ್ಮತ್ರ ದಾಖಲೆ ಇದ್ರೆ ತೋರಿಸಬೇಕಿತ್ತು. ಬಿಜೆಪಿ ವಿರುದ್ಧ ರಾಷ್ಟ್ರದ ಯುವ ಜನತೆ ಎದ್ದು ನಿಂತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಮುಖ್ಯವಲ್ಲ, ಜಿ.ಟಿ ದೇವೇಗೌಡ ಮಾತ್ರ ಮುಖ್ಯ – ಜಿಟಿಡಿ ಖಡಕ್ ಹೇಳಿಕೆ
ದೇಶವೇ ಅಲ್ಲೋಲ ಕಲ್ಲೋಲ ವಿಚಾರ ಹೇಳ್ತೇನೆಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಬರಿ ಟೀಕೆ ಮಾಡೋದಕ್ಕೆ ಒಬ್ಬರಿಗೆ ಕೇಂದ್ರ ಸಚಿವ ಸ್ಥಾನ ಕೊಟ್ಟಿದ್ದಾರೆ. ಹಿಂದೆ ಹಾವಾಡಿಗರು ಐದಾರು ಬುಟ್ಟಿ ತರುತ್ತಿದ್ದರು. ಅದರಲ್ಲಿ ವಿಷ ಸರ್ಪಗಳಿವೆ. ಬುಟ್ಟಿಯಲ್ಲಿರೋ ಹಾವಿನಲ್ಲಿ ವಿಷ ಇದೆ ಅಂತಿದ್ರು. ಆದ್ರೆ ಹಾವುಗಳನ್ನ ಅವರು ತೋರಿಸುತ್ತಿರಲಿಲ್ಲ. ಆಗೆಯೇ ಕುಮಾರಸ್ವಾಮಿ ದಾಖಲೆ ಇದೇ ದಾಖಲೆ ಇದೆ ಅಂತಾರೆ. ಆದ್ರೆ ಈವರೆಗೂ ಒಂದೇ ಒಂದು ದಾಖಲೆ ಬಿಟ್ಟಿಲ್ಲ. ಸದನದಲ್ಲೂ ಅಷ್ಟೇ ಹೆಚ್ಡಿಕೆ, ರೇವಣ್ಣ ಅವರೇ ಕಾಣದಷ್ಟು ಎತ್ತರದ ಫೈಲ್ ಇಟ್ಟಿಕೊಂಡು ಕೂರುತ್ತಿದ್ದರು. ಆದ್ರೆ ಯಾವ ದಾಖಲೆಯನ್ನು ಇದುವರೆಗೂ ಬಿಟ್ಟಿಲ್ಲ. ಒಂದು ರೀತಿ ಕುಮಾರಸ್ವಾಮಿ ಹಿಟ್ & ರನ್. ಈಗಲೂ ಹಿಟ್ & ರನ್ ಬೇಡಾ. ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಬೇಡಿ. ಅಮೆರಿಕಾದಿಂದ ಟ್ರಂಪ್ ಬಳಿ ಟ್ರಂಕ್ ಇಸ್ಕೊಂಡು ಬನ್ನಿ. ಆದ್ರೆ ಈಗಲಾದರೂ ದಾಖಲೆಗಳನ್ನ ಬಿಡುಗಡೆ ಮಾಡಿ. ಕುಮಾರಣ್ಣ ನಿಮ್ಮ ಬುಟ್ಟಿಯಲ್ಲಿ ಏನಿದೆ ತೋರಿಸಿ. ದೊಡ್ಡ ದೊಡ್ಡ ಕುಸ್ತಿಗಳನ್ನ ಹೊಡೆದುಕೊಂಡು ಬಂದ ದೊಡ್ಡ ಪೈಲ್ವಾನ್ ಡಿಕೆಶಿ. ಕುಮಾರಸ್ವಾಮಿ ವಿರುದ್ಧ ಕುಸ್ತಿ ಗೆದ್ದ ಒಬ್ಬನೇ ಪೈಲ್ವಾನ್ ಡಿಕೆಶಿ. ಅವರು ಎಂತಹ ಪಟ್ಟಾಕಿದ್ರೂ ಡಿಕೆಶಿ ಉತ್ತರ ಕೊಡುತ್ತಾರೆ ಎಂದು ಟಾಂಗ್ ಕೊಟ್ಟರು.
